ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಫಲಿತಾಂಶ: ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಪ್ರಸನ್ನಾ ಪೈಗೆ 600 ಅಂಕ

ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಸನ್ನಾ ಪೈ
Last Updated 21 ಜುಲೈ 2021, 4:04 IST
ಅಕ್ಷರ ಗಾತ್ರ

ಬೈಂದೂರು:ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಸನ್ನಾ ಪೈ 600 ಕ್ಕೆ 600 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಕಾಲೇಜಿಗೆ ಹಾಗೂ ಗಂಗೊಳ್ಳಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೂಡ ಶಾಲೆಗೆ ಮತ್ತು ಗಂಗೊಳ್ಳಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಪತ್ರಕರ್ತ ಬಿ. ರಾಘವೇಂದ್ರ ಪೈ ಮತ್ತು ರಾಧಿಕಾ ಆರ್. ಪೈ ದಂಪತಿ ಪುತ್ರಿ. ಈಕೆಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

’ವಿಶೇಷ ಸಾಧನೆ ಮಾಡಿರುವುದು ಸಂತಸ ತಂದಿದೆ. ಪರೀಕ್ಷೆ ರದ್ದಾದ ಬಳಿಕ ಆದ ಗೊಂದಲಗಳಿಂದ ವಿಚಲಿತಳಾಗಿದ್ದೆ. ಫಲಿತಾಂಶ ಬರುವವರೆಗೆ ಅಂಕದ ಕುರಿತು ಖಚಿತತೆ ಇರಲಿಲ್ಲ. ಅಂತಿಮ ಪರೀಕ್ಷೆ ಬರೆದು ಇಷ್ಟು ಅಂಕ ಗಳಿಸಿದ್ದರೆ ಇನ್ನಷ್ಟು ಖುಷಿಯಾಗುತ್ತಿತ್ತು. ಮುಂದೆ ವೈದ್ಯಕೀಯ ಅಥವಾ ಫಾರ್ಮಸಿ ಕ್ಷೇತ್ರದಲ್ಲಿ ಶಿಕ್ಷಣ ಮುಂದುವರಿಸುವ ಆಸೆ ಇದೆ. ನನ್ನ ಸಾಧನೆ ಹಿಂದೆ ತಂದೆ, ತಾಯಿ, ಕುಟುಂಬದ ಸದಸ್ಯರು ಹಾಗೂ ಕಾಲೇಜಿನ ಉಪನ್ಯಾಸಕರು ನೀಡಿದ ಸಹಕಾರ, ಬೆಂಬಲ ಬಹಳಷ್ಟು ಇದೆ ಎಂದು ವಿದ್ಯಾರ್ಥಿನಿ ಪ್ರಸನ್ನಾ ಆರ್. ಪೈ ತಿಳಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT