ಶುಕ್ರವಾರ, ಅಕ್ಟೋಬರ್ 7, 2022
23 °C
ಸಂಜೀವಿನಿ ಫಾರ್ಮ್‌ -ಗೋಧಾಮದಲ್ಲಿ ಎಸ್‌.ಎಸ್‌. ನಾಯಕ್‌

ಹೆಬ್ರಿ: ಗೋ ಸೂಕ್ತ ಹೋಮ ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಬ್ರಿ: ಮಂಗಳೂರಿನ ಸಿ.ಎ. ಎಸ್.ಎಸ್.ನಾಯಕ್‌ ಮತ್ತು ಸಂಧ್ಯಾ ಎಸ್‌.ನಾಯಕ್‌ ದಂಪತಿ ಮುನಿಯಾಲಿನ ದೇಶೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್‌ ಮತ್ತು ಡೈರಿ ಗೋಧಾಮದಲ್ಲಿ ತಮ್ಮ ಷಷ್ಠ್ಯಬ್ಧಿ ಪ್ರಯುಕ್ತ ಗೋವುಗಳೊಂದಿಗೆ ಗೋ ಸೂಕ್ತ ಹೋಮ ವಿಶೇಷ ಪೂಜೆಯಲ್ಲಿ ಭಾಗಿಯಾದರು.

ಷಷ್ಠ್ಯಬ್ಧಿ ಸಂಭ್ರಮದ ಪ್ರಯುಕ್ತ ಎಸ್.ಎಸ್‌. ನಾಯಕ್‌ ಗೋಧಾಮದ ಸದಸ್ಯತ್ವ ಪಡೆದರು. ಗೋಧಾಮದ ಸಂಸ್ಥಾಪಕ ಜಿ. ರಾಮಕೃಷ್ಣ ಆಚಾರ್‌ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಉಡುಪಿಯ ಕುಮಾರಗುರು ತಂತ್ರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಪುರೋಹಿತ್‌ ದಾಮೋದರ ಶರ್ಮಾ ಅಭಿನಂದನ ಭಾಷಣ ಮಾಡಿದರು. ಮಂಗಳೂರು ಇಸ್ಕಾನ್‌ ದೇವಾಲಯದ ಸನಂದನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.

ಲೀಲಾವತಿ ನಾಯಕ್‌, ಸಿ.ಎ. ಸಂಕೇತ್‌ ನಾಯಕ್‌, ಪ್ರತೀಕ್ಷಾ ನಾಯಕ್‌, ವಕೀಲ ಸಚಿನ್‌ ನಾಯಕ್‌, ಮಂಗಳೂರು ಎಕ್ಸ್‌ಪರ್ಟ್‌ ಕಾಲೇಜಿನ ಮುಖ್ಯಸ್ಥ ನರೇಂದ್ರ ನಾಯಕ್‌, ಕರ್ನಾಟಕ ಬ್ಯಾಂಕ್‌ ನಿವೃತ್ತ ಹಿರಿಯ ಅಧಿಕಾರಿ ನಾಗರಾಜ ರಾವ್‌, ರಮೇಶ ರಾವ್‌ ಮಂಗಳೂರು, ಕಾರ್ಕಳ ವಿವೇಕಾನಂದ ಶೆಣೈ, ನಿತ್ಯಾನಂದ ಶೆಟ್ಟಿಗಾರ್‌, ಯೋಗೀಶ ಪೈ, ಎಸ್ ಎಲ್‌.ನಾಯಕ್‌, ಡಾ. ನಯನಾ, ಸುರೇಶ್‌ ಶೆಣೈ ಮಂಗಳೂರು, ಕಾಡುಹೊಳೆ ಸುಬ್ರಹ್ಮಣ್ಯ ಭಟ್‌, ಗೋಧಾಮದ ಕಾರ್ಯದರ್ಶಿ ಸವಿತಾ ಆರ್‌. ಆಚಾರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು