ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಮೀನಿನ ಬೆಲೆ ₹ 2.34 ಲಕ್ಷ! ಹೆಸರೇನು ಗೊತ್ತಾ?

Last Updated 27 ಡಿಸೆಂಬರ್ 2022, 14:42 IST
ಅಕ್ಷರ ಗಾತ್ರ

ಉಡುಪಿ: ಆಳ ಸಮುದ್ರ ಮೀನುಗಾರಿಕೆ ಮಾಡುವಾಗ ಮೀನುಗಾರರ ಬಲೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಗೋಲ್ ಮೀನು ಬಿದ್ದಿದೆ.

ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ನಡೆದ ಹರಾಜಿನಲ್ಲಿ 22 ಕೆ.ಜಿ ತೂಕದ ಗೋಲ್‌ ಮೀನು ₹ 2.34 ಲಕ್ಷಕ್ಕೆ ಮಾರಾಟವಾಗಿದೆ. ಗೋಲ್ ಮೀನು ಔಷಧಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಕಡಲಿನಲ್ಲಿ ಬಹಳ ಅಪರೂಪಕ್ಕೆ ಗೋಲ್ ಮೀನು ಸಿಗುತ್ತದೆ. ಹಾಗಾಗಿ, ಬೆಲೆ ದುಬಾರಿ ಎನ್ನುತ್ತಾರೆ ಮೀನುಗಾರರು.

ಕೆಲವು ತಿಂಗಳ ಹಿಂದೆಯೂ ಮಲ್ಪೆ ಮೀನುಗಾರರಿಗೆ ಹಲವು ಗೋಲ್ ಮೀನು ಸಿಕ್ಕಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT