ಶನಿವಾರ, ಸೆಪ್ಟೆಂಬರ್ 26, 2020
22 °C
ಸರ್ಕಾರಿ ಶಾಲೆ ವಿದ್ಯಾರ್ಥಿನಿಯ ‘ಭವ್ಯ’ ಸಾಧನೆ

ಎಸ್ಸೆಸ್ಸೆಲ್ಸಿ ಸಾಧಕಿ | ಶಾಲೆ ಮುಖ್ಯವಲ್ಲ; ಓದುವ ಮನಸ್ಸಿರಬೇಕು: ಭವ್ಯಾ ನಾಯಕ್

ವಿಶೇಷ ವರದಿ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ನಗರದ ವಳಕಾಡು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಭವ್ಯಾ ನಾಯಕ್‌ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 622 ಅಂಕ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಪೋಷಕರ ನಡುವೆ  ಭವ್ಯಾ ಸಾಧನೆ ಬೆರಗು ಮೂಡಿಸುವಂತಿದೆ.

ಸರ್ಕಾರಿ ಶಾಲೆಗಳ (ಇಂಗ್ಲೀಷ್‌ ಮಾಧ್ಯಮ) ಫಲಿತಾಂಶದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿರುವ ಭವ್ಯಾ ನಾಯಕ್‌ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಖಾಸಗಿ ಶಾಲೆಗಳಲ್ಲಿ ಮಾತ್ರ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ವಾದ ಖಂಡಿತ ಸರಿಯಲ್ಲ. ಓದುವ ಮನಸ್ಸಿದ್ದರೆ ಸರ್ಕಾರಿ ಶಾಲೆಗಳಲ್ಲೂ ಉತ್ತಮ ಅಂಕಪಡೆಯಬಹುದು’ ಎಂದರು.

ಒಳಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಉತ್ತಮ ಬೋಧನಾ ಸೌಲಭ್ಯಗಳಿದ್ದು, ಖಾಸಗಿ ಶಾಲೆಗಳಂತೆ ಸ್ಮಾರ್ಟ್‌ ಕ್ಲಾಸ್‌ ಸೌಲಭ್ಯವೂ ಇದೆ. ಮಾದರಿ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿಸುವ ಕ್ರಮ ಇದೆ. ಶಾಲೆಯಲ್ಲಿ ‌ಲಭ್ಯವಿರುವ ಸೌಕರ್ಯಗಳನ್ನು ಬಳಸಿಕೊಂಡಿದ್ದರ ಫಲವಾಗಿ ಉತ್ತಮ ಅಂಕಗಳು ಬಂದಿವೆ ಎಂದರು.

‘ಪಾಠಗಳನ್ನು ಬಾಯಿಪಾಠ ಮಾಡುತ್ತಿರಲಿಲ್ಲ. ವಿಷಯವನ್ನು ಗಮನವಿಟ್ಟು ಆಲಿಸಿ, ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ಇದರಿಂದ ಓದಿದ್ದು ಮನಸ್ಸಿನಲ್ಲಿ ಉಳಿಯುತ್ತಿತ್ತು. ಪಠ್ಯಪುಸ್ತಕಗಳ ಓದಿಗೆ ಹೆಚ್ಚು ಗಮನ ನೀಡುತ್ತಿದ್ದೆ’ ಎಂದು ಭವ್ಯಾ ನಾಯಕ್ ತಿಳಿಸಿದರು.

‘ಕೊರೊನಾ ಸೋಂಕಿನಿಂದ ಪರೀಕ್ಷೆ ರದ್ದಾಗುವ ಭಯವಿತ್ತು. ಪರೀಕ್ಷೆ ನಡೆಯಲಿ ಎಂದು ಪ್ರತಿದಿನ ಬೇಡಿಕೊಳ್ಳುತ್ತಿದೆ. ಲಾಕ್‌ಡೌನ್ ಅವಧಿಯೂ ಓದಿಗೆ ಪೂರಕವಾಯಿತು. ನಿರೀಕ್ಷೆಯಷ್ಟು ಅಂಕ ಬಂದಿರುವುದು ಸಂತಸವಾಗಿದೆ’ ಎಂದರು ಭವ್ಯಾ.

ಮುಂದೆ, ವಿಜ್ಞಾನ ವಿಷಯ ಆಯ್ಕೆಮಾಡಿಕೊಂಡು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಆಸೆ ಭವ್ಯಾಗೆ ಇದೆಯಂತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು