ಸೋಮವಾರ, ಮಾರ್ಚ್ 8, 2021
27 °C

ಸರಿಯಾದ ಕ್ರಮ ಅಲ್ಲ: ನೀರೆ ಕೃಷ್ಣ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಬ್ರಿ: ‘ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ನಾಮನಿರ್ದೇಶನದೊಂದಿಗೆ ಹೊಸ ಸಮಿತಿ ರಚನೆಗೆ ಮುಂದಾಗಿರುವುದು ದುರದೃಷ್ಟಕರ. ಇದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಜಾರಿಗೆ ತಂದಿರುವ ಪಂಚಾಯಿತಿರಾಜ್ ಕಾಯ್ದೆಗೆ ವಿರುದ್ಧವಾಗಿದೆ’ ಎಂದು ಕಾರ್ಕಳ ತಾಲ್ಲೂಕು ಪಂಚಾಯಿತಿರಾಜ್ ಒಕ್ಕೂಟದ ಗೌರವಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕೊರೊನಾ ಮಹಾಮಾರಿಯ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಅಸಾಧ್ಯ. ಆದರೆ, ರಾಜಕೀಯ ವ್ಯಕ್ತಿಗಳ ನಾಮನಿರ್ದೇಶನದ ಸಮಿತಿಯನ್ನು ರಚನೆ ಮಾಡುವುದು ಸರಿಯಾದ ಕ್ರಮವಲ್ಲ. 73ನೇ ತಿದ್ದುಪಡಿಯಲ್ಲಿ ಗ್ರಾಮ ಪಂಚಾಯಿತಿಗೆ ಸದಾಕಾಲ ಚುನಾಯಿತ ಪ್ರತಿನಿಧಿಗಳೇ ಇರಬೇಕು. ಈಗಿರುವ ಪಂಚಾಯಿತಿ ಸದಸ್ಯರ ಆಡಳಿತವನ್ನು ಆರು ತಿಂಗಳು ಮುಂದುವರಿಸಬಹುದು ಅಥವಾ ಆಡಳಿತಾಧಿಕಾರಿಗಳ ನೇಮಕ ಮಾಡಬಹುದು. ನಾಮನಿರ್ದೇಶನ ಸಮಿತಿಯನ್ನು ರಚಿಸಿದರೆ ರಾಜಕೀಯ  ಹಸ್ತಕ್ಷೇ‍ಪವಾಗಿ, ವಿಕೇಂದ್ರಿಕರಣ ವ್ಯವಸ್ಥೆಗೆ ಮಾರಕವಾಗಲಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು