ಸೋಮವಾರ, ಸೆಪ್ಟೆಂಬರ್ 26, 2022
22 °C

ತಷಾನ್‌, ಪೂರ್ವಿ ‘ಆರೋಗ್ಯವಂತ ಶಿಶು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಡುಬಿದ್ರಿ: ಜೇಸಿಐ ಪಡುಬಿದ್ರಿ ಮತ್ತು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆರೋಗ್ಯವಂತ ಶಿಶು ಸ್ಪರ್ಧೆ ಆಯೋಜಿಸಲಾಯಿತು.

ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜಶ್ರೀ ಕಿಣಿ ಮತ್ತು ಕಾಪು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನೀತಾ ಗುರುರಾಜ್ ಮುಖ್ಯ ಅತಿಥಿಗಳಾಗಿದ್ದರು.

ಜೇಸಿಐ ಪಡುಬಿದ್ರಿಯ ಜೇಸೀ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷ ಶರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಯೋಜಕಾರದ ಬ್ರಹ್ಮಾವರ ಪೂಜಾ ಫಾರ್ಮಾದ ಪ್ರತಿನಿಧಿ ದಿನಕರ್ ಶೆಟ್ಟಿ ಮತ್ತು ಮುಂಬೈ ಎಚ್‌ಅಂಡ್‌ಎಚ್ ಫಾರ್ಮಾ ಪ್ರತಿನಿಧಿ ಕಿರಣ್ ಶೆಟ್ಟಿ, ಜೇಸೀರೆಟ್ ಅಧ್ಯಕ್ಷೆ ನಿಧಿ ಶರತ್, ಕಾರ್ಯಕ್ರಮ ನಿರ್ದೇಶಕರುಗಳಾದ ಸುರೇಶ್ ಪಡುಬಿದ್ರಿ, ಶಾಲಿನಿ ಸುರೇಶ್ ಮತ್ತು ಸುಪ್ರಿಯಾ ಅನಿಲ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಫಲಿತಾಂಶ: (1 ವರ್ಷದೊಳಗಿನ ವಿಭಾಗ) : ಪ್ರಥಮ- ತಷಾನ್ (ತಾಯಿ-ದೀಪಾ) ಬೀಚ್ ರಸ್ತೆ, ಪಡುಬಿದ್ರಿ, ದ್ವಿತೀಯ-ಯದ್ವಿ (ಸುಜಾತಾ) ಅದಮಾರು ರಸ್ತೆ, ಎರ್ಮಾಳು ತೆಂಕ, ತೃತೀಯ-ವಿಶ್ರುದ್ (ದೀಪಿಕಾ) ಕಲ್ಲಟ್ಟೆ.

(1-2 ವರ್ಷದೊಳಗಿನ ವಿಭಾಗ): ಪ್ರಥಮ-ಪೂರ್ವಿ (ಸುಲತಾ), ನಡ್ಸಾಲು, ದ್ವಿತೀಯ-ಶಾರ್ವಿ (ಸಹನಾ ಶೆಟ್ಟಿ), ಬೇಂಗ್ರೆ ರಸ್ತೆ, ತೃತೀಯ-ಗ್ಯಾನ (ಸಂಗೀತಾ) ಗುಡ್ಡೆ ಹೌಸ್ ಪಡುಬಿದ್ರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು