ಬುಧವಾರ, ಆಗಸ್ಟ್ 21, 2019
22 °C

ಭಾರಿ ಮಳೆ: ಹಲವು ರೈಲುಗಳ ಸಂಚಾರ ರದ್ದು

Published:
Updated:

ಉಡುಪಿ: ಮುಂಬೈ ಡಿವಿಷನ್‌ನಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಆ.7ರಂದು ಕುರ್ಲಾ–ತ್ರಿವೆಂಡ್ರಮ್‌ ಮಾರ್ಗವಾಗಿ ತೆರಳಬೇಕಿದ್ದ 16345 ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ರದ್ದುಗೊಳಿಸಲಾಗಿದೆ. ಸೋಮವಾರ ತಿರುನಲ್ವೆಲಿ– ಜಾಮ್‌ನಗರ ನಡುವೆ ಸಂಚರಿಸಬೇಕಿದ್ದ ಹಾಗೂ ಕುಚುವೆಲಿ–ಚಂಡಿಘಡ ಮದ್ಯೆ ಸಂಚರಿಸಬೇಕಿದ್ದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲು ಕೂಡ ರದ್ದಾಗಿದೆ.

ಆ.6ರಂದು ಎರ್ನಾಕುಲಂ–ಮಡಗಾವ್ ನಡುವೆ ಓಡಾಡುವ ಗೋವಾ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ. ಸೋಮವಾರ ಸಂಚರಿಸಬೇಕಿದ್ದ ಚಂಡಿಘಡ–ಮಡಗಾವ್ ಮಧ್ಯೆ ಓಡುವ ಗೋವಾ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲು ಕೂಡ ಸಂಚರಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Post Comments (+)