ಹೆಬ್ರಿ: ಗೋಳಿಯಂಗಡಿ ಶ್ರೀದುರ್ಗಾ ವಿವಿಧೋದ್ದೇಶ ಸಹಕಾರ ಸಂಘದ ಹೆಬ್ರಿ ಶಾಖೆಯನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.

ಶಾಖೆ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ‘ಪ್ರಾಮಾಣಿಕ, ನಿಷ್ಠಾವಂತ ಕುಡುಬಿ ಸಮಾಜವು ಯಾವುದೇ ಪ್ರಚಾರವನ್ನು ಬಯಸದೆ ಸಮಾಜದ ಉದ್ಧಾರಕ್ಕೋಸ್ಕರ ಆರ್ಥಿಕ ಸಂಸ್ಥೆಯನ್ನು ಸ್ಥಾಪಿಸಿ ಶ್ರಮಿಸುತ್ತಿರುವುದು ಶ್ಲಾಘನೀಯ’ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ಕುಡುಬಿ ಸಮಾಜ ಅತ್ಯಂತ ಹಿಂದುಳಿದಿದೆ. ಅವರನ್ನು ಅಲೆಮಾರಿ ಸಮುದಾಯಗಳ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇದರಿಂದ ಸರ್ಕಾರದ ಸೌಲಭ್ಯ ದೊರಕಲಿವೆ ಎಂದು ಹೇಳಿದರು.

ಗೋಳಿಯಂಗಡಿ ಶ್ರೀ ದುರ್ಗಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬೆಳ್ವೆ ತೆಂಕಬೆಟ್ಟು ಕೃಷ್ಣ ನಾಯ್ಕ್, ಎಲ್ಲರೂ ಸಹಕಾರ ನೀಡಿದಾಗ ಸಹಕಾರಿ ಸಂಘ ಉತ್ತಮವಾಗಿ ಬೆಳೆಯುತ್ತದೆ. ಶಿಕ್ಷಣ ಹಾಗೂ ಆರ್ಥಿಕ ಚಟುವಟಿಕೆ ಮೂಲಕ ಸಂಘಟಿತರಾಗೋಣ ಎಂದರು.

ಗಣೇಶ್ ಶೇಡಿಮನೆ ನಿರೂಪಿಸಿದರು. ಸಂಘದ ಸಿಇಒ ಲಲಿತ ಮರೂರು ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಕೃಷ್ಣ ನಾಯ್ಕ ಕಾರಿಕೊಡ್ಲು ವಂದಿಸಿದರು. ಲಕ್ಷ್ಮಣ್ ನಾಯ್ಕ ಆರ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೆಬ್ರಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ದಿನೇಶ ಡಿ.ಈ, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ ಕುಮಾರ್, ಜಿಲ್ಲಾ ಕುಡುಬಿ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಪ್ರಭಾಕರ ನಾಯ್ಕ, ರಾಜ್ಯ ಕುಡುಬಿ ಸಮಾಜ ಸಂಘ ಗೋಳಿಯಂಗಡಿ ಉಪಾಧ್ಯಕ್ಷ ಅಣ್ಣಪ್ಪ ನಾಯ್ಕ ಅಲ್ಬಾಡಿ, ಕಟ್ಟಡ ಮಾಲೀಕ ರಾಮ ನಾಯ್ಕ ಕೆ., ನಿರ್ದೇಶಕರಾದ ಕೃಷ್ಣ ನಾಯ್ಕ ಸೂರ್ಗೋಳಿ, ಪ್ರಭಾಕರ ನಾಯ್ಕ ತೊನ್ನಾಸೆ ಹಾಡಿಮನೆ, ಕಾಳು ನಾಯ್ಕ ಎಲ್ಸಿಮನೆ ಹೆಂಗವಳ್ಳಿ, ಸೂರ್ಯಕಾಂತಿ ಹೆಂಗವಳ್ಳಿ, ಜಾನಕಿ ಬೆಳನಬೆಟ್ಟು ಕಲ್ಲಾಟೆ, ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-28-1157545190

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.