ಹೆಬ್ರಿ: ಅಮೃತ ಭಾರತಿ ವಿದ್ಯಾ ಸಂಸ್ಥೆ ಸೇವಾ ಮನೋಭಾವದೊಂದಿಗೆ ಸಂಸ್ಕಾರ ಮತ್ತು ಜೀವನ ಕಲೆಯ ಜ್ಞಾನವನ್ನು ಧಾರೆ ಎರೆಯುತ್ತಿದೆ. ಮಕ್ಕಳಿಗೆ ಪರೀಕ್ಷೆ ಎದುರಿಸುವುದನ್ನು ಕಲಿಸುವುದರ ಜೊತೆಗೆ ಜೀವನದ ಪರೀಕ್ಷೆಗಳನ್ನು ಎದುರಿಸುವ ಮೌಲ್ಯಯುತ ಶಿಕ್ಷಣ ದೊರಕಿಸುವ ಸಂಸ್ಥೆ ಇದಾಗಿದೆ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಭಟ್ ಹೇಳಿದರು.

ಸೋಮವಾರ ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತಭಾರತಿ ಪದವಿಪೂರ್ವ ಕಾಲೇಜಿನ ಪ್ರಾರಂಭೋತ್ಸವ, ಪಿಯುಸಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ಸಿ.ಎ. ರವಿ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಿಗೆ ಓದಿನಲ್ಲಿ ಏಕಾಗ್ರತೆ, ಸಮಯಪಾಲನೆ, ಜೀವನದಲ್ಲಿ ಶಿಸ್ತು ಮುಖ್ಯ. ಶಿಕ್ಷಣ ಸಂಸ್ಥಗಳು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಮಕ್ಕಳನ್ನು ಸಮಾಜದ ಆಸ್ತಿಯಾಗಿ ಮಾಡಬೇಕು. ಅಮೃತ ಭಾರತಿಯು ಮೌಲ್ಯಯುತ ಶಿಕ್ಷಣ ನೀಡುತ್ತಿದ್ದು, ನಮ್ಮ ಸಂಸ್ಕೃತಿ, ಕಲೆ, ಸಂಸ್ಕಾರವನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಿದೆ ಎಂದರು.

ದ್ವಿತೀಯ ಪಿಯುಸಿ, ಸಿಎಸ್ಇಇಟಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹೆಬ್ರಿ ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ, ಅಮೃತಭಾರತಿ ಪದವಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ ನಾಯಕ್, ಟ್ರಸ್ಟಿಗಳಾದ ಯೋಗೀಶ್ ಭಟ್, ಬಾಲಕೃಷ್ಣ ಮಲ್ಯ, ಶೈಲೇಶ ಕಿಣಿ, ಭಾಸ್ಕರ ಜೋಯಿಸ್, ರಾಮಕೃಷ್ಣ ಆಚಾರ್ಯ, ವಿಷ್ಣುಮೂರ್ತಿ ನಾಯಕ್, ಪಿಆರ್ಒ ವಿಜಯ ಕುಮಾರ್ ಶೆಟ್ಟಿ ಇದ್ದರು. ಪ್ರಾಂಶುಪಾಲ ಪ್ರಕಾಶ ಜೋಗಿ ಸ್ವಾಗತಿಸಿದರು. ವಿಜಯ ಕುಮಾರ್ ಶೆಟ್ಟಿ ವಂದಿಸಿದರು. ವೀಣೇಶ್ ಅಮೀನ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-28-872938682

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.