ಹೆಬ್ರಿ: ಮುನಿಯಾಲು ಸಮೀಪದ ಪಡುಕುಡೂರಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ 600 ವರ್ಷಗಳಿಗೂ ಪುರಾತನವಾದ ಶ್ರೀಕಾಡ್ಯ, ನಾಗಸ್ಥಾನ ಮತ್ತು ಪರಿವಾರ ದೈವಗಳ ಕ್ಷೇತ್ರವನ್ನು, ಶ್ರೀಕ್ಷೇತ್ರದ ವ್ಯಾಪ್ತಿಗೊಳಪಟ್ಟ ಸಮಾನ ಮನಸ್ಕರೆಲ್ಲ ಸೇರಿ ಜೀರ್ಣೋದ್ಧಾರ ಸಮಿತಿ ರಚಿಸಿ, ಜೀರ್ಣೋದ್ಧಾರದ ಕಾರ್ಯ ನಡೆಸುತ್ತಿದ್ದಾರೆ.

ಪುರಾತನ ಕ್ಷೇತ್ರ ಬಗ್ಗೆ ವೇದಮೂರ್ತಿ ರವಿರಾಜ್ ಉಪಾಧ್ಯಾಯರು ಪ್ರಶ್ನಾಚಿಂತನೆಯಲ್ಲಿ ತಿಳಿಸಿದಂತೆ, ಪಡುಕುಡೂರು ಶಿವಪುರ ರಸ್ತೆಯ ಪಡುಬದಿಯಿಂದ ಮತ್ತು ಕೊಡಂಜೆ ಮನೆಯಿಂದ ಮೂಡುಬದಿಯ ವರೆಗಿನ ಎಲ್ಲ ಮನೆಯವರಿಗೆ ಶ್ರೀಕಾಡ್ಯ ಕ್ಷೇತ್ರವು ಸಂಬಂಧಿಸಿರುವುದೆಂದು ಕಂಡು ಬಂದಿದೆ. ಸುಂದರ ಕಾನನದ ನಡುವೆ ಶ್ರೀಕಾಡ್ಯ ಕ್ಷೇತ್ರಕ್ಕೆ ಅಂದಿನ ಕಾಲದಲ್ಲೇ ಜಾಗವನ್ನು ಮೀಸಲಿರಿಸಲಾಗಿದ್ದು, ಇದೀಗ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದೆ.

₹20 ಲಕ್ಷ ವೆಚ್ಚದಲ್ಲಿ ಶ್ರೀಕಾಡ್ಯ, ನಾಗಸ್ಥಾನ ಮತ್ತು ಪರಿವಾರ ದೈವಗಳ ಸಾನ್ನಿಧ್ಯದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂದಿನ ಹಂತದಲ್ಲಿ ಕ್ಷೇತ್ರಕ್ಕೆ ಆವರಣ ಗೋಡೆ, ತೆರೆದ ಬಾವಿ ನಿರ್ಮಾಣ ಸೇರಿ ವಿವಿಧ ಅವಶ್ಯ ಕಾರ್ಯಗಳು ನಡೆಯಬೇಕಿದೆ. ಭಕ್ತ ಸಮೂಹ ಶ್ರೀಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ನೆರವು ನೀಡುವಂತೆ ಸಮಿತಿಯು ಮನವಿ ಮಾಡಿದೆ.

ಏ. 23ರಂದು ಶ್ರೀಕಾಡ್ಯ, ನಾಗಸ್ಥಾನದ ಪ್ರತಿಷ್ಠಾ ಮಹೋತ್ಸವ: ಶ್ರೀಕಾಡ್ಯ ನಾಗಸ್ಥಾನ ಮತ್ತು ಪರಿವಾರ ಶಕ್ತಿಗಳ ಪ್ರತಿಷ್ಠಾ ಮಹೋತ್ಸವವು ಏ. 22, 23ರಂದು ಜರುಗಲಿದ್ದು, ವೇದಮೂರ್ತಿ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಮತ್ತು ವೇದಮೂರ್ತಿ ರವಿರಾಜ್ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.

ಶ್ರೀಕಾಡ್ಯ ಕ್ಷೇತ್ರದ ಕುಕ್ಕುದಕಟ್ಟೆಯ ಅರ್ಚಕ ಕುಟುಂಬಸ್ಥರಿಂದ ಪೂಜೆಗಳು ನೆರವೇರಲಿದ್ದು, 22ರಂದು ವಾಸ್ತುಹೋಮ, ರಾಕ್ಷೋಘ್ನ ಹೋಮ ಸಹಿತ ಧಾರ್ಮಿಕ ವಿಧಿವಿಧಾನಗಳು ಹಾಗೂ 23ರಂದು ಶ್ರೀಕಾಡ್ಯ, ನಾಗದೇವರು, ಪರಿವಾರ ಶಕ್ತಿಗಳ ಪ್ರತಿಷ್ಠಾ ಮಹೋತ್ಸವ, ಕಲಶಾಭಿಷೇಕ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿಯು ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-28-423956665

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.