ಹೆಬ್ರಿ: ಹೆಬ್ರಿ -ಮಾಂಡಿ -ಮೂರ್ಕೈ ಸಂಪರ್ಕಿಸುವ ಮುಖ್ಯ ರಸ್ತೆಗೆ ಡಾಂಬರ್ ಹಾಕುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಕೆಲ ದಿನಗಳ ಹಿಂದೆ ಹೆಬ್ರಿ ಕುಚ್ಚೂರು ಭಾಗದ ಗ್ರಾಮಸ್ಥರು ಪ್ರತಿಭಟಿಸಿದ್ದ ಸ್ಥಳಕ್ಕೆ ಮುಖಂಡರು ಭೇಟಿ ನೀಡಿದರು.

ಗುತ್ತಿಗೆದಾರರು ಮೊದಲೇ ತಿಳಿಸಿದ ಹಾಗೆ ರಸ್ತೆ ವಿಸ್ತರಣೆ ಆಗಬೇಕು. ಇಲ್ಲದಿದ್ದರೆ ಡಾಂಬರ್ ಹಾಕುವುದು ಬೇಡ ಎಂದು ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಪೂಜಾರಿ ಕುಚ್ಚೂರು ನೇತೃತ್ವದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸುನಿಲ್ ಕುಮಾರ್, ‘ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ರಸ್ತೆ ವಿಸ್ತರಣೆ ಆಗಲಿದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ’ ಎಂದು ಭರವಸೆ ನೀಡಿದರು. ಸ್ಥಳೀಯರು ಹಾಜರಿದ್ದರು.

ಕಾಮಗಾರಿ ನಿಲ್ಲಿಸಿ: ‘ಹೆಬ್ರಿಯ ಕುಚ್ಚೂರು ರಸ್ತೆಯನ್ನು ವಿಸ್ತರಣೆ ಮಾಡುವುದಾದರೆ ಮಾತ್ರ ಕಾಮಗಾರಿ ನಡೆಸಿ. ಇಲ್ಲದಿದ್ದರೆ ಡಾಂಬರ್ ಹಾಕುವ ಕೆಲಸ ನಿಲ್ಲಿಸಿ’ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಲೋಕೋಪಯೋಗಿ ಅಧಿಕಾರಿಗಳಿಗೆ ಹೇಳಿದರು.

ಅಧಿಕಾರಿಗೆ ಕರೆ ಮಾಡಿದ ಅವರು, ‘ಸ್ಥಳೀಯರು ದೂರು ನೀಡಿರುವ ಕಾರಣಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಸರಿ ಇರುವ ರಸ್ತೆಗೆ ಮತ್ತೆ ಯಾಕೆ ಡಾಂಬರ್ ಹಾಕಬೇಕು. ನೀವು ಫೈಲ್ ಕ್ಲೋಸ್ ಮಾಡಲು ಹೀಗೆ ಮಾಡುತ್ತಿದ್ದೀರಿ. ಈಗ ಕೆಲಸ ಮಾಡಿ ಹೋದರೆ ಮತ್ತೆ ರಸ್ತೆಯ ವಿಸ್ತರಣೆ ಆಗುವುದಿಲ್ಲ. ಮಳೆಗಾಲ ಆರಂಭವಾಗಲಿದ್ದು, ಡಿಸೆಂಬರ್ ನಂತರ ಅರಣ್ಯ ಇಲಾಖೆಯ ಅನುಮತಿ ಪಡೆದು ನಂತರ ಸರಿಯಾಗಿ ಕಾಮಗಾರಿ ಮಾಡಿ’ ಎಂದು ಹೇಳಿದರು.

ಕುಚ್ಚೂರು ಶ್ರೀಕಾಂತ್ ಪೂಜಾರಿ, ಚಾರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ ಶೆಟ್ಟಿ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-28-245940979

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.