ಹೆಬ್ರಿ: ಹೆಬ್ರಿ ತಾಲ್ಲೂಕಿನ ಶಿವಪುರ ಎಲಿಕೋಡು ಮಠದಲ್ಲಿ ಶಿಲಾಮಯ ಗರ್ಭಗೃಹ ಸಮರ್ಪಣೆ, ನಾಗಬ್ರಹ್ಮ ಪರಿವಾರ ದೇವರುಗಳ ಪ್ರತಿಷ್ಠಾಪನೆ ಮತ್ತು ಗೋಪಾಲಕೃಷ್ಣ ಹಾಗೂ ದುರ್ಗಾಪರಮೇಶ್ವರಿ ದೇವರ ಪುನ:ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಾನುವಾರ ನಡೆಯಿತು.

ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಪೂಜೆ ನೆರವೇರಿಸಿ, ಮಂತ್ರಾಕ್ಷತೆ ನೀಡಿದರು. ಅರ್ಚಕ ವಾಸುದೇವಾ ಭಟ್ ಶಿವಪುರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.

ವ್ಯವಸ್ಥಾಪಕರಾದ ಶ್ರೀನಿವಾಸ, ಬೈಕಾಡಿ ಮಂಜುನಾಥ ರಾವ್, ಭೋಜ ಶೆಟ್ಟಿ, ಎಲಿಕೋಡು ಪ್ರದೇಶದ ಪ್ರಮುಖರಿಗೆ ಕ್ಷೇತ್ರದ ಪ್ರಸಾದ ನೀಡಿ ಗೌರವಿಸಲಾಯಿತು. ಎಲಿಕೋಡು ಮಠದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಎಲಿಕೋಡು ಮನೆತನದವರು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು.

ಎಲಿಕೋಡು ಮಠದ ಪ್ರಧಾನ ಅರ್ಚಕ ವಾಸುದೇವ ಆಚಾರ್ಯ, ಪ್ರಮುಖರಾದ ನಿತ್ಯಾನಂದ ಶೆಟ್ಟಿ, ಶ್ರೀನಾಥ್ ಎಲಿಕೋಡು, ಶಂಕರನಾರಾಯಣ ಕೊಡಂಚ, ಡಾ. ಗುರುಪ್ರಸಾದ ಕೊಡಂಚ, ರಾಧಮ್ಮ ಎಲಿಕೋಡು, ಎಲಿಕೋಡಿನ ಪ್ರಮುಖರಾದ ಚಂದು ನಾಯ್ಕ್, ರಮೇಶ ನಾಯ್ಕ್, ಪಾಂಡು ನಾಯ್ಕ್, ಹರೀಶ ನಾಯ್ಕ್, ಸಂತೋಷ ನಾಯ್ಕ್, ಪ್ರದೀಪ ನಾಯ್ಕ್ ಸಹಿತ ಎಲಿಕೋಡು ಮಠದ ಪ್ರಮುಖರು, ಎಲಿಕೋಡು ಮನೆತನದವರು, ವಿವಿಧ ಪ್ರಮುಖರು, ಅರ್ಚಕರು, ವ್ಯವಸ್ಥಾಪನಾ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರು ಸೇರಿದಂತೆ ನೂರಾರು ಭಕ್ತರು ಭಾಗಿಯಾದರು. ಎಲಿಕೋಡು ಶಿವಪುರ ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-28-1962539735

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.