ಹೆಬ್ರಿ: ವಿದ್ಯುತ್ ಕಂಬಗಳಿಗೆ ಅಳಡಿಸಿರುವ ಕೇಬಲ್ಗಳನ್ನು ಕೆಲವು ಕಡೆ ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ಕಂಬಗಳು ಬಿದ್ದಾಗ ಕೇಬಲ್ಗಳು ರಸ್ತೆಯಲ್ಲಿ ಇರುತ್ತವೆ. ಇದರಿಂದ ಅಪಘಾತಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿದೆ. ಕೇಬಲ್ಗಳ ಸೂಕ್ತ ನಿರ್ವಹಣೆ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಹೆಬ್ರಿ ತಾಲ್ಲೂಕು ಅಧ್ಯಕ್ಷ ಶಂಕರ್ ಸೇರಿಗಾರ ಒತ್ತಾಯಿಸಿದರು.

ಹೆಬ್ರಿಯ ಮೆಸ್ಕಾಂ ಉಪ ವಿಭಾಗದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ನಾಡ್ಪಾಲು ಗ್ರಾಮದ ಬಡತಿಂಗಳೆ, ತಮ್ಲಬ್ಬಿಯಲ್ಲಿ ಕಡಿಮೆ ವೋಲ್ಟೇಜ್ನಿಂದ ಸಮಸ್ತೆಯಾಗಿದೆ. ಸೋಮೇಶ್ವರ ಪೇಟೆಯಲ್ಲಿ ಚರಂಡಿಯಲ್ಲೇ ವಿದ್ಯುತ್ ಕಂಬ ಇದ್ದು ತೆರವು ಮಾಡುವಂತೆ ವೆಂಕಟೇಶ ಶೆಟ್ಟಿ ಮನವಿ ಮಾಡಿದರು.

ಮೆಸ್ಕಾಂ ಸೂಪರಿಟೆಂಡಿಂಗ್ ಎಂಜಿನಿಯರ್ ರಾಕೇಶ್ ಬೇಕಲ್ ಮಾತನಾಡಿ, ಮಳೆಗಾಲಕ್ಕೆ ಬೇಕಾದ ಪೂರ್ವ ತಯಾರಿಯನ್ನು ಮಾಡಿ ಕೊಂಡು, ಜನರ ಕೆಲಸವನ್ನು ಆದ್ಯತೆ ನೆಲೆಯಲ್ಲಿ ಮಾಡಿಕೊಡಬೇಕು. ಕೆಲವೆಡೆ ಇರುವ ಅಪಾಯಕಾರಿ ಮರ ತೆರೆವುಗೊಳಿಸಲಾಗುವುದು. ಹೆಬ್ರಿಯಲ್ಲಿ ಉತ್ತಮ ತಂಡ ಇರುವುದರಿಂದ ಕೆಲಸ ಗಳು ಒಳ್ಳೆಯ ರೀತಿ ನಡೆಯುತ್ತಿದೆ ಎಂದರು.

ಸಭೆಯಲ್ಲಿ, ಜೆಇಗಳಾದ ಲಕ್ಷ್ಮಿಶ್, ಸಂದೀಪ್, ಎಒ ಪವನ್, ವಿದ್ಯುತ್ ಗುತ್ತಿಗೆದಾರರಾದ ಶ್ರೀನಿವಾಸ್ ಹೆಬ್ಬಾರ್ ಶಿವಪುರ, ಎಚ್.ಬಿ ಸುರೇಶ್, ಬಾಲಕೃಷ್ಣ ಶೆಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-28-1572921354

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.