ಹೆಬ್ರಿ: ಭಕ್ತಿ ವೈಭವದಿಂದ ನಡೆದ ಶಂಕರದೇವ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ಸಂಪನ್ನಗೊಂಡಿತು. ಸಹಸ್ರಾರು ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ರಾತ್ರಿ ಅಂಕುರಾರೋಪಣ, ಮಹಾ ರಂಗಪೂಜೆ ನಡೆಯಿತು. ಕ್ಷೇತ್ರದ ತಂತ್ರಿ ಹೇರ್ಗ ರಾಘವೇಂದ್ರ ತಂತ್ರಿ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಗಮಿಸಿದರು. ಅವರನ್ನು ಕ್ಷೇತ್ರದ ವತಿಯಿಂದ ಭವ್ಯವಾಗಿ ಸ್ವಾಗತಿಸಿ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.

ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು, ‘ಊರ– ಪರವೂರ ಭಕ್ತರ ಸಹಕಾರದಲ್ಲಿ ಎಲ್ಲರ ಒಗ್ಗೂಡುವಿಕೆಯಿಂದ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶಾಭಿಷೇಕವನ್ನು ಆಡಂಬರವಿಲ್ಲದೆ ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ. ಸರ್ವರ ಶ್ರಮದ ಫಲವಾಗಿ ಕ್ಷೇತ್ರ ನಿರ್ಮಾಣವಾಗಿದೆ. ವೈಭವದ ಬ್ರಹ್ಮಕಲಶಾಭಿಷೇಕವಾಗಿದೆ’ ಎಂದು ಹೇಳಿದರು.

‘ಪ್ರಸಾದ ರೂಪದಲ್ಲಿ ಕೊಲ್ಲೂರು ಕ್ಷೇತ್ರದಿಂದ ಹೊರೆಕಾಣಿಕೆ ದೊರೆತಿರುವುದು ನಮ್ಮ ಸೌಭಾಗ್ಯ’ ಎಂದರು.

ಸಹಸ್ರಾರು ಮಂದಿ ಭಕ್ತರಿರುವ ಶಿವಪುರ ಗ್ರಾಮದೇವರಾದ ಶಂಕರದೇವ ದೇವಸ್ಥಾನದಲ್ಲಿ ಪ್ರತಿ ಸಂಕ್ರಮಣದಂದು ಅನ್ನದಾನ ಸೇವೆ, ಪ್ರತಿ ಸೋಮವಾರ ವಿಶೇಷ ಪೂಜೆ ಸೇವೆ ನಡೆಯಬೇಕು. ಅದಕ್ಕಾಗಿ ಸರ್ವರೂ ಚಿಂತನೆ ಮಾಡಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಕ್ಷೇತ್ರ ನಿರ್ಮಾಣದಲ್ಲಿ ಶಿವಪುರ ಶ್ರೀನಿವಾಸ ಹೆಬ್ಬಾರ್, ಸುರೇಶ್ ಶೆಟ್ಟಿ, ವಿಶ್ವನಾಥ ನಾಯಕ್, ವಾಸುದೇವ ಭಟ್, ಸಂತೋಷ ಕುಮಾರ್ ಶೆಟ್ಟಿ ಮತ್ತವರ ತಂಡದ ಕಾರ್ಯ, ಕಾರ್ಯಾಧ್ಯಕ್ಷ ಅಜಿತ್ ಎಸ್. ಶೆಟ್ಟಿ ಸೇವೆಯನ್ನು ಸ್ಮರಿಸಿದರು.

ಧಾರ್ಮಿಕ ಸಭೆ ಉದ್ಘಾಟಿಸಿದ ಬರೋಡದ ಉದ್ಯಮಿ ಶಶಿಧರ ಶೆಟ್ಟಿ ಮಾತನಾಡಿದರು.

ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅವರು, ‘ಗ್ರಾಮದ ದೇವಸ್ಥಾನದ ಜೀರ್ಣೋದ್ಧಾರದಿಂದ ಊರಿಗೆ ವಿಶೇಷ ಶಕ್ತಿ ಬರುತ್ತದೆ’ ಎಂದರು.

ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ ಅವರು ಕ್ಷೇತ್ರದ ಮುಂದಿನ ಅಭಿವೃದ್ಧಿಗೆ ನೆರವು ನೀಡುವುದಾಗಿ ತಿಳಿಸಿದರು.

ದಾನಿಗಳಾದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಅಜಿತ್ ಎಸ್. ಶೆಟ್ಟಿ, ಉದ್ಯಮಿಗಳಾದ ಚಿಟ್ಟೆಬೆಟ್ಟು ಹರೀಶ ಶೆಟ್ಟಿ ಪೂನೆ, ಖಜಾನೆ ಹರೀಶ ಶೆಟ್ಟಿ ಪುಣೆ, ರಾಜರಾಮ ಹೆಗ್ಡೆ ಹಿರಿಯಡ್ಕ, ಉದಯ ಕಡಂಬ ಶಿವಮೊಗ್ಗ, ಕಲ್ಯಾಣ ಸಿಂಗ್ ಉಡುಪಿ, ಯಳಗೋಳಿ ಪ್ರಸನ್ನ ಸಿ. ಶೆಟ್ಟಿ ಮಧ್ಯಪ್ರದೇಶ, ಪ್ರಮೋದ ರೈ ಪಳಜ, ತೆಳ್ಳಾರು ಗಿರೀಶ್ ಶೆಟ್ಟಿ ಮುಂಬೈ, ಮುದ್ರಾಡಿ ಮಂಜುನಾಥ ಪೂಜಾರಿ, ಶಿಲ್ಪಿ ನಾರಾಯಣ ಆಚಾರ್ಯ ಉಡುಪಿ, ಸುಬ್ಬಯ್ಯ ಶೆಟ್ಟಿ ಹುಣ್ಸೆಯಡಿ ಸಹಿತ ದಾನಿಗಳು, ಸಹಕಾರ ನೀಡಿದವರನ್ನು ಗೌರವಿಸಲಾಯಿತು. ಅವದಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಆರ್ಥಿಕ ಸಮಿತಿ ಅಧ್ಯಕ್ಷ ಸುರೇಶ ಶೆಟ್ಟಿ ಅವರು ಜೀರ್ಣೋದ್ಧಾರ, ಬ್ರಹ್ಮಕಲಶಾಭಿಷೇಕದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಬೇಳಂಜೆ ಬಾದ್ಲು ಹರೀಶ ಶೆಟ್ಟಿ, ಪ್ರವೀಣ್ ಬಲ್ಲಾಳ್ ಹೆಬ್ರಿ, ಬಿಲ್ಲುಬೈಲು ಚಂದ್ರಶೇಖರ ಶೆಟ್ಟಿ, ಶೇಖರ ಪಿ. ಶೆಟ್ಟಿ, ದೇವಸ್ಥಾನದ ಕಾಮಗಾರಿ ಸಮಿತಿ ಸಂಚಾಲಕ ಶ್ರೀನಿವಾಸ ಹೆಬ್ಬಾರ್ ಶಿವಪುರ, ಆರ್ಥಿಕ ಸಮಿತಿ ಅಧ್ಯಕ್ಷ ಸುರೇಶ ಶೆಟ್ಟಿ, ಬೈಕಾಡಿ ಮಂಜುನಾಥ ರಾವ್ ಶಿವಪುರ, ಸಂತೋಷ ಕುಮಾರ್ ಶೆಟ್ಟಿ, ಸಚಿನ್ ನಾಯ್ಕ್, ಜಗನ್ನಾಥ ಕುಲಾಲ್, ರಾಘವೇಂದ್ರ ಪ್ರಭು, ಶಿವಪ್ರಸಾದ್ ಅಡಿಗ, ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಸ್ವಾಗತ ಸಮಿತಿ, ಅರ್ಚಕರು, ಉಪಸಮಿತಿಗಳ ಪ್ರಮುಖರು, ಸದಸ್ಯರು ಭಾಗವಹಿಸಿದ್ದರು.

ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಶಿವಪುರ ನಿರೂಪಿಸಿದರು. ಮಂಜುನಾಥ ಕುಲಾಲ್, ರಮಾನಂದ ಶೆಟ್ಟಿ ಸಹಕರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್ ಸ್ವಾಗತಿಸಿದರು. ಸುರೇಶ ಶೆಟ್ಟಿ ಹುಣ್ಸೆಯಡಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-28-1914611975

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.