ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.9ರಿಂದ ರಾಜ್ಯಮಟ್ಟದ ಕಬಡ್ಡಿ

16 ವರ್ಷ ವಯೋಮಿತಿಯ ಬಾಲಕ- ಬಾಲಕಿಯರ ಟೂರ್ನಿ
Last Updated 6 ಡಿಸೆಂಬರ್ 2022, 5:21 IST
ಅಕ್ಷರ ಗಾತ್ರ

ಹೆಬ್ರಿ: ಶಿವಪುರ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಕರ್ನಾಟಕ ರಾಜ್ಯ ಮತ್ತು ಉಡುಪಿ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಮತ್ತು ಫ್ರೆಂಡ್ಸ್‌ ಶಿವಪುರ ಆಶ್ರಯದಲ್ಲಿ ಡಿ.9ರಿಂದ 3 ದಿನಗಳ ಕಾಲ ನಡೆಯಲಿರುವ 16 ವರ್ಷ ವಯೋಮಿತಿಯ ಬಾಲಕ- ಬಾಲಕಿಯರ ಹೊನಲು ಬೆಳಕಿನ ರಾಜ್ಯಮಟ್ಟದ ಸಬ್‌ ಜೂನಿಯರ್‌ ಕಬಡ್ಡಿ ಚಾಂಪಿಯನ್‌ಷಿಪ್‌ಗೆ ಸಿದ್ಧತೆಗಳು ನಡೆಯುತ್ತಿದೆ.

ಕಬಡ್ಡಿ ಟೂರ್ನಿಗೆ ಅಂಗಣ ತಯಾರಿ, ಪ್ರೇಕ್ಷಕರು ಕುಳಿತುಕೊಳ್ಳುಲು ಗ್ಯಾಲರಿ, ಮೈದಾನದಲ್ಲಿ ಇತರ ವ್ಯವಸ್ಥೆ, ಸಾರ್ವಜನಿಕರು ಮತ್ತು ಕ್ರೀಡಾಪಟುಗಳಿಗೆ ಊಟೋಪಚಾರಕ್ಕೆ ಪಾಕಶಾಲೆ ನಿರ್ಮಾಣ ಸಹಿತ ವಿವಿಧ ವ್ಯವಸ್ಥೆಯನ್ನು ಮಾಡಿಕೊಳ್ಳವಾಗುತ್ತಿದೆ.

ಫ್ರೆಂಡ್ಸ್‌ ಶಿವಪುರ ಹೆಸರಿನಲ್ಲಿ ಶಿವಪುರದ ಪ್ರಮುಖರು ಟೂರ್ನಿ ಆಯೋಜನೆ ಮಾಡಿದ್ದಾರೆ. ಕಬಡ್ಡಿ ಟೂರ್ನಿ ಆಯೋಜನಾ ಸಮಿತಿಯ 17 ಉಪಸಮಿತಿಗಳು, ಸಂಘಸಂಸ್ಥೆಯ ಕಾರ್ಯಕರ್ತರು, ದೈಹಿಕ ಶಿಕ್ಷಣ ಶಿಕ್ಷಕರ ತಂಡ, ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಚಾಂಪಿಯನ್‌ಶಿಪ್‌ ಸದಸ್ಯರು, ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಶಿವಪುರದಂತಹ ಗ್ರಾಮೀಣ ಪ್ರದೇಶದಲ್ಲಿ ರಾಜ್ಯದ ಮಟ್ಟದ ಟೂರ್ನಿ ನಡೆಯುತ್ತಿರುವುದು ಶ್ಲಾಘನೀಯ. ಪ್ರತಿದಿನ ಸಾವಿರಾರು ಕ್ರೀಡಾಪ್ರೇಮಿಗಳು ಸೇರುವ ನಿರೀಕ್ಷೆಯಿದೆ ಎಂದು ಟೂರ್ನಿ ಆಯೋಜನಾ ಸಮಿತಿಯ ಅಧ್ಯಕ್ಷ ಸುಮಿತ್‌ ಹೆಗ್ಡೆ ಯಡ್ದೆ ಮತ್ತು ಮುಖಂಡರಾದ ರಮೇಶ್‌ ಕುಮಾರ್‌ ಶಿವಪುರ ತಿಳಿಸಿದರು.

ವಿವಿಧ ಜಿಲ್ಲೆಗಳ ಯುವಕ ಯುವತಿಯರ 54 ತಂಡಗಳ 648 ಕ್ರೀಡಾಳುಗಳು ಟೂರ್ನಿಯಲ್ಲಿ ಪಾಲ್ಗೊಳ್ಳುವರು ಎಂದು ಉಡುಪಿ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷ ರಾಜೇಂದ್ರ ಸುವರ್ಣ ತಿಳಿಸಿದರು.

‘ಕಬಡ್ಡಿ ಟೂರ್ನಿಯನ್ನು ನಮ್ಮೂರಿನ ಉತ್ಸವದಂತೆ ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದೇವೆ ಎಂದು ಆಯೋಜನಾ ಸಮಿತಿ ಗೌರವಾಧ್ಯಕ್ಷ ಶಿವಪುರ ಸುರೇಶ ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT