ಹೆಬ್ರಿ: ‘ತಾಲ್ಲೂಕು ಕಚೇರಿಯಲ್ಲಿ ಕೆಳಹಂತದ ಅಧಿಕಾರಿಗಳು ಮತ್ತು ನೌಕರರು ಸಾರ್ವಜನಿಕರನ್ನು ನಿರ್ಲಕ್ಷ್ಯ ಮಾಡಿ ಕಚೇರಿ ಕೆಲಸಗಳಿಗೆ ಅಲೆದಾಡಿಸಿ ವಿಳಂಬ ಮಾಡುತ್ತಿದ್ದಾರೆ. ಜನರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡಿ’ ಎಂದು ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಟ್ರಸ್ಟ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.

ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಟ್ರಸ್ಟ್ ವತಿಯಿಂದ ತಾಲ್ಲೂಕು ಕಚೇರಿ ವಿರುದ್ಧ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಕಚೇರಿಯಲ್ಲಿ ಜನರಿಗೆ ಸೌಲಭ್ಯಗಳನ್ನು ಆದ್ಯತೆಯಲ್ಲಿ ನೀಡಿ, ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಕಾರ್ಯವನ್ನು ಕೂಡಲೇ ಮುಗಿಸಿದರೆ ಅಕ್ರಮ–ಸಕ್ರಮ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ನೌಕರರ ಅಸಹಕಾರದಿಂದ ತಾಲ್ಲೂಕು ಆಡಳಿತಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಹೇಳಿದರು.

ಸರ್ಕಾರ ಗುರಿ ನಿಗದಿ ಪಡಿಸಿದ ಎಲ್ಲ ಕೆಲಸಗಳ ನಡುವೆ ಡೀಮ್ಡ್ ಫಾರೆಸ್ಟ್ ಜಂಟಿ ಸರ್ವೆ ಕಾರ್ಯ ನಡೆಸುತ್ತಿದ್ದು, ಶೀಘ್ರ ಮುಕ್ತಾಯಗೊಳ್ಳಲಿದೆ. ಜನರ ಕೆಲಸಗಳಿಗೆ ವಿಳಂಬ ಮಾಡಲ್ಲ. ಆದ್ಯತೆಯಲ್ಲಿ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಸ್.ಎ. ಪ್ರಸಾದ್ ಹೇಳಿದರು.

ಬಿಜೆಪಿ ಶಕ್ತಿಕೇಂದ್ರದವರು ಪ್ರತಿಭಟನೆಗೆ ಬೆಂಬಲ ನೀಡಿದರು. ಅಕ್ರಮ–ಸಕ್ರಮ ಸಮಿತಿಯ ಸದಸ್ಯ ನವೀನ್ ಕೆ ಅಡ್ಯಂತಾಯ, ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಟ್ರಸ್ಟ್ ಪದಾಧಿಕಾರಿಗಳು, ಮುಖಂಡರಾದ ಹೆಬ್ರಿ ಪ್ರವೀಣ್ ಬಲ್ಲಾಳ್, ವಾದಿರಾಜ ಶೆಟ್ಟಿ, ವರಂಗ ಲಕ್ಷ್ಮಣ ಆಚಾರ್, ಕಿರಣ್ ತೋಳಾರ್, ಭೋಜ ಕುಲಾಲ್, ಎಚ್. ಜನಾರ್ದನ್, ಅಣ್ಣಪ್ಪ ಕುಲಾಲ್, ಮುರ್ಸಾಲು ಮೋಹನದಾಸ ನಾಯಕ್, ಶಶಿಕಲಾ ಡಿ.ಪೂಜಾರಿ ಮುದ್ರಾಡಿ, ಸಂತೋಷ ನಾಯಕ್ ಕನ್ಯಾನ, ನಿತೀಶ್ ಎಸ್ ಪಿ, ಹರೀಶ ಶೆಟ್ಟಿ ನಾಡ್ಪಾಲು, ಬಿಜೆಪಿ ಹೆಬ್ರಿ ಶಕ್ತಿಕೇಂದ್ರದ ಅಧ್ಯಕ್ಷ ಲಕ್ಷ್ಮಿನಾರಾಯಣ ನಾಯಕ್, ಶಿವಪುರ ಸುರೇಶ ಶೆಟ್ಟಿ, ಬಿಜೆಪಿ ಪ್ರಮುಖರಾದ ಜ್ಯೋತಿ ಹರೀಶ ಪೂಜಾರಿ, ಅಮೃತ್ ಕುಮಾರ್ ಶೆಟ್ಟಿ, ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಸುಧಾಕರ ಹೆಗ್ಡೆ, ರಮೇಶ ಕುಮಾರ್ ಶಿವಪುರ, ಸಾರ್ವಜನಿಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-28-540746697

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.