ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕರ್ಮ ಪೂಜಾ ಮಹೋತ್ಸವ, ವಾರ್ಷಿಕ ಸಭೆ

Published : 17 ಸೆಪ್ಟೆಂಬರ್ 2024, 6:58 IST
Last Updated : 17 ಸೆಪ್ಟೆಂಬರ್ 2024, 6:58 IST
ಫಾಲೋ ಮಾಡಿ
Comments

ಹೆಬ್ರಿ: ಇಲ್ಲಿನ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ವಿಶ್ವಕರ್ಮ ಮಹಿಳಾ ಮಂಡಳಿ, ಯುವ ವೃಂದದ ಸಹಕಾರದಲ್ಲಿ ಸೋಮವಾರ 41ನೇ ವರ್ಷದ ವಿಶ್ವಕರ್ಮ ಪೂಜಾ ಮಹೋತ್ಸವ, ವಾರ್ಷಿಕ ಮಹಾಸಭೆ ಸಂಘದ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆಯಿತು.

ಯಳಗೋಳಿ ರವೀಂದ್ರ ಪುರೋಹಿತ್‌ ನೇತೃತ್ವದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳು ನಡೆದವು. ಬಳಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು. ಮುದ್ರಾಡಿ ಯೂನಿಯನ್‌ ಬ್ಯಾಂಕ್‌ ಅಧಿಕಾರಿ ಚೆನ್ನಕೇಶವ ಎಸ್‌. ಶಿವಮೊಗ್ಗ ಮಾತನಾಡಿ ಹಾರೈಸಿದರು.

ಪದ್ಮನಾಭ ಆಚಾರ್ಯ ದಂಪತಿ, ಶೈಕ್ಷಣಿಕ ಸಾಧಕಿ ಪ್ರೀಯಾ ಆಚಾರ್ಯ ತಣ್ಣೀರು ಅವರನ್ನು ಸನ್ಮಾನಿಸಲಾಯಿತು. ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕೇಶವ ಆಚಾರ್ಯ ಮುದ್ರಾಡಿ ಲೆಕ್ಕಪತ್ರ ಮಂಡಿಸಿದರು. ಸಂಘದ ಮುಖಂಡ, ಬ್ಯಾಂಕ್‌ ನಿವೃತ್ತ ಅಧಿಕಾರಿ ಟಿ.ಜಿ.ಆಚಾರ್ಯ, ಉಪಾಧ್ಯಕ್ಷ ಕೇಶವ ಆಚಾರ್ಯ ಮುದ್ರಾಡಿ, ಕೋಶಾಧಿಕಾರಿ ರವೀಂದ್ರ ಪುರೋಹಿತ್‌, ಕಾರ್ಯದರ್ಶಿ ಸುರೇಂದ್ರ ಆಚಾರ್ಯ, ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಸುಗುಣ ಎಸ್‌. ಆಚಾರ್ಯ ಬಚ್ಚಪ್ಪು, ಯುವ ವೃಂದದ ಅಧ್ಯಕ್ಷ ಸಂತೋಷ ಆಚಾರ್ಯ ಅಡಾಲಬೆಟ್ಟು ಇದ್ದರು.

ಕಾರ್ಯದರ್ಶಿ ಎಚ್.ಎಂ. ಶಶಿಶಂಕರ್‌ ನಿರೂಪಿಸಿ, ವಾರ್ಷಿಕ ವರದಿ ಮಂಡಿಸಿದರು. ರಾಜೇಶ ಆಚಾರ್ಯ ಮಠದಬೆಟ್ಟು ಸ್ವಾಗತಿಸಿದರು. ಪ್ರೇಮಾ ಎಂ. ವರಂಗ, ರತ್ನಾಕರ ಆಚಾರ್ಯ ಶಿವಪುರ ಸನ್ಮಾನಪತ್ರ ವಾಚಿಸಿದರು. ಪ್ರಸನ್ನ ಆಚಾರ್ಯ ಮಠದಬೆಟ್ಟು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT