ಶಿರೂರು ಮಠದ ಚರಾಸ್ತಿ ಹಸ್ತಾಂತರ

7
ಸೋದೆ ಮಠಕ್ಕೆ ಹಸ್ತಾಂತರ ಮಾಡಲಿದೆ ಪೊಲೀಸ್ ಇಲಾಖೆ

ಶಿರೂರು ಮಠದ ಚರಾಸ್ತಿ ಹಸ್ತಾಂತರ

Published:
Updated:
Deccan Herald

ಉಡುಪಿ: ಶಿರೂರು ಮಠದ ಸಂಪೂರ್ಣ ಚರಾಸ್ತಿಯನ್ನು ಸೋದೆ ಮಠಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದೆ. 

ಹಿರಿಯಡಕದ ಮೂಲಮಠ ಹಾಗೂ ಕೃಷ್ಣಮಠದ ಪರಿಸರದಲ್ಲಿರುವ ಶಿರೂರು ಮಠದಲ್ಲಿರುವ ದೇವರ ವಿಗ್ರಹ, ಪೂಜಾ ಸಾಮಗ್ರಿಗಳು, ಚಿನ್ನಾಭರಣ ಸೇರಿದಂತೆ ಸಂಪೂರ್ಣ ಚರಾಸ್ತಿಯ ವಿವರವನ್ನು ಪೊಲೀಸ್ ಇಲಾಖೆ ಸಂಗ್ರಹಿಸಿದ್ದು, ಇನ್ನೆರಡು ದಿನಗಳಲ್ಲಿ ಸೋದೆ ಮಠದ ವಶಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.‌

ಈಗಾಗಲೇ ಶಿರೂರು ಮಠದ ಉಸ್ತುವಾರಿಗೆ ಸೋದೆ ಶ್ರೀಗಳು ಐವರು ಸದಸ್ಯರ ನೇತೃತ್ವದ ಸಮಿತಿ ರಚಿಸಿದ್ದಾರೆ. ಮೂಲಮಠದ ಉಸ್ತುವಾರಿಯನ್ನಾಗಿ ಸುಬ್ರಹ್ಮಣ್ಯ ಭಟ್ ಹಾಗೂ ರಥಬೀದಿಯಲ್ಲಿರುವ ಮಠಕ್ಕೆ ವಿಠಲ ಭಟ್ ಅವರನ್ನು ನಿಯೋಜಿಸಲಾಗಿದೆ.

ಶಿರೂರು ಲಕ್ಷ್ಮೀವರ ತೀರ್ಥರು ನಿಧನರಾದ ಬಳಿಕ, ಎರಡೂ ಮಠಗಳು ಪೊಲೀಸರ ಸುಪರ್ದಿಯಲ್ಲಿದ್ದವು. ಶಿರೂರು ಮಠಕ್ಕೆ ಉತ್ತರಾಧಿಕಾರಿ ಇಲ್ಲವಾದ ಕಾರಣ ದ್ವಂದ್ವಮಠವಾದ ಸೋದೆ ಮಠಕ್ಕೆ ಸ್ಥಿರಾಸ್ತಿ ಹಸ್ತಾಂತರ ಮಾಡಬೇಕಿದ್ದು, ಅದರಂತೆ, ಪ್ರಕ್ರಿಯೆಗಳು ನಡೆಯುತ್ತಿವೆ.

ಮತ್ತೊಂದೆಡೆ ಶಿರೂರು ಮಠ ಸಂಪೂರ್ಣವಾಗಿ ಸೋದೆ ಮಠದ ಸುಪರ್ದಿಗೆ ಬಂದ ಬಳಿಕ, ಮಠದ ಸ್ಥಿರಾಸ್ತಿಗಳು ಎಲ್ಲಿವೆ, ಯಾವ ಉದ್ಯಮಿಗಳ ಜತೆ ವ್ಯವಹಾರ ಸಂಬಂಧವಿದೆ, ಸಾಲದ ಪ್ರಮಾಣ ಎಷ್ಟು ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುವುದು ಎಂದು ಸೋದೆ ಶ್ರೀಗಳು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !