ಪಡುಬಿದ್ರಿ: ಹೆಜಮಾಡಿ ಬಸ್ತಿಪಡ್ಪು ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಲಡೆಯಲ್ಲಿ ದೇವರ ಮತ್ತು ಪರಿವಾರ ದೈವಗಳ ಸಂಕೋಚ, ಬಾಲಾಲಯ ಪ್ರತಿಷ್ಠಾಪನೆ ಕಾರ್ಯಕ್ರಮ ಶುಕ್ರವಾರ ನಡೆಯಿತು.

₹5 ಕೋಟಿ ವೆಚ್ಚದಲ್ಲಿ ಆಲಡೆಯು ಪುನರ್ನಿರ್ಮಾಣಗೊಳ್ಳಲಿದೆ. ಗುರುವಾರ ರಾತ್ರಿಯಿಂದಲೇ ನಾನಾ ಧಾರ್ಮಿಕ ವಿಧಿವಿಧಾನಗಳು ನಡೆದವು. ಕ್ಷೇತ್ರದ ತಂತ್ರಿ ಕೊಲಕಾಡಿ ವಾದಿರಾಜ ಉಪಾಧ್ಯಾಯ, ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ನೇತೃತ್ವ ವಹಿಸಿದ್ದರು.

ಬ್ರಹ್ಮಲಿಂಗೇಶ್ವರ, ಅಬ್ಬಗ ದಾರಗ, ಕುಮಾರ, ರಕ್ತೇಶ್ವರಿ, ಕ್ಷೇತ್ರಪಾಲ, ನಂದಿಗೋಣ, ಸಾರಮಾಣಿ ದೈವಗಳನ್ನು ಸಂಕೋಚಗೊಳಿಸಿ ಬಾಲಾಲಯ ಪ್ರತಿಷ್ಠೆ ನಡೆಯಿತು. ಬಳಿಕ ನಾಗದೇವರನ್ನು ಸಂಕೋಚಗೊಳಿಸಿ ಜಳಕದ ಕೆರೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ಬ್ರಹ್ಮಕಲಶ ಪರ್ಯಂತ ನಿರಂತರ ಭಜನೆ, ಪ್ರವಚನ, ಜಪ– ತಪ ನಿರಂತರ ನಡೆಯಲಿದೆ ಎಂದು ವಾದಿರಾಜ ಉಪಾಧ್ಯಾಯ ಹೇಳಿದರು. ಆಲಡೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಟೇಲರಮನೆ ಪುಷ್ಪರಾಜ್ ಶೆಟ್ಟಿ, ಆಡಳಿತ ಮೊಕ್ತೇಸರ ಸುರೇಶ್ ಶೆಟ್ಟಿ, ಹೆಜಮಾಡಿ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ದಾಸ್ ಹೆಜ್ಮಾಡಿ, ಮೂಲ್ಕಿ ಬಿಲ್ಲವರ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ರವಿ ಶೆಟ್ಟಿ, ಸುಧಾಕರ ಕರ್ಕೇರ, ಎಚ್. ರವಿ ಕುಂದರ್, ಹೇಮಾನಂದ ಪುತ್ರನ್, ಸತೀಶ್ ಕೋಟ್ಯನ್ ಸುಪ್ರ, ಅರುಣ್ ಶೆಟ್ಟಿ, ಸುರೇಖಾ ಶೆಟ್ಟಿ, ಮಾಧವ ಸನಿಲ್, ಪ್ರಭೋದ್ಚಂದ್ರ ಹೆಜ್ಮಾಡಿ, ಸುರೇಖಾ ಶೆಟ್ಟಿ ಐಕಳ, ಗಣೇಶ್ ಕೋಟ್ಯಾನ್ ಪಡುಬಿದ್ರಿ, ಶರಣ್ಕುಮಾರ್ ಮಟ್ಟು, ದೊಂಬ ಪೂಜಾರಿ, ಶಿಲ್ಪಿ ಸುಬ್ರಹ್ಮಣ್ಯ ಕಾರ್ಕಳ, ಡಾ.ಶ್ರೀವತ್ಸ ಉಪಾಧ್ಯಾಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.