ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿಯಲ್ಲಿ ಯಕ್ಷಗಾನ ಪ್ರದರ್ಶನ 15ರಂದು

ಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದಲ್ಲಿ ಚಕ್ರವ್ಯೂಹ ಪ್ರಸಂಗ
Last Updated 14 ಜೂನ್ 2022, 14:10 IST
ಅಕ್ಷರ ಗಾತ್ರ

ಉಡುಪಿ: ಯಕ್ಷಗಾನ ಕಲಾಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ನಿರ್ದೇಶನದಲ್ಲಿ ಉಡುಪಿಯಲ್ಲಿ ಮೊದಲ ಬಾರಿಗೆ ಬಡಗುತಿಟ್ಟಿನಲ್ಲಿಹಿಂದಿ ಯಕ್ಷಗಾನ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.

ಪ್ರಸಿದ್ಧ ಕಲಾವಿದ ಕೆ.ಕೆ.ಹೆಬ್ಬಾರ್ ಅವರ ಜನ್ಮದಿನದ ಅಂಗವಾಗಿ ಹೆಬ್ಬಾರ್ ಗ್ಯಾಲರಿ ಅಂಡ್ ಆರ್ಟ್‌ ಸೆಂಟರ್‌ನಿಂದಜೂನ್‌ 15ರಂದು ಸಂಜೆ 6ಕ್ಕೆ ಮಣಿಪಾಲ್ ಸೆಂಟರ್ ಫಾರ್ ಹ್ಯುಮಾನಿಟಿಯ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ‘ಚಕ್ರವ್ಯೂಹ’ ಯಕ್ಷಗಾನ ಪ್ರಸಂಗ ಏರ್ಪಡಿಸಲಾಗಿದ್ದು ಪ್ರವೇಶ ಉಚಿತವಾಗಿದೆ.

ದೆಹಲಿ, ಪುಣೆ ಸೇರಿದಂತೆ ದೇಶದ ಹಲವೆಡೆ ಈಗಾಗಲೇ ಹಿಂದಿಯಲ್ಲಿ ಯಕ್ಷಗಾನ ಪ್ರದರ್ಶನ ನಡೆದಿವೆ. ಉಡುಪಿಯಲ್ಲಿಯೂ ತೆಂಕುತಿಟ್ಟಿನಲ್ಲಿ ಹಿಂದಿ ಯಕ್ಷಗಾನ ಪ್ರದರ್ಶನವಾಗಿದೆ. ಆದರೆ, ಬಡಗುತಿಟ್ಟಿನಲ್ಲಿ ಇದು ಮೊದಲ ಪ್ರಯೋಗ ಎಂದು ಗುರು ಬನ್ನಂಜೆ ಸಂಜೀವ ಸುವರ್ಣ ತಿಳಿಸಿದರು.

ಮಾಧವಿ ಭಂಡಾರಿಯವರು ಕನ್ನಡದ ಪ್ರಸಂಗವನ್ನು ಹಿಂದಿಭಾಷೆಗೆ ಪರಿಣಾಮಕಾರಿಯಾಗಿ ಅನುವಾದಿಸಿದ್ದಾರೆ. ಕರಾವಳಿಯ ಯಕ್ಷಗಾನ ಕಲೆಯು ಭಾಷೆಗಳ ಗಡಿ ಮೀರಿ ಬೆಳೆಯಬೇಕಾದರೆ ಪ್ರಯೋಗಗಳು ಅವಶ್ಯ. ಕಲಾಸಕ್ತರ ಮಾತೃಭಾಷೆಗಳಲ್ಲಿ ಯಕ್ಷಗಾನ ಪ್ರದರ್ಶನಗಳ ಆಯೋಜನೆಯಿಂದ ಯಕ್ಷಗಾನ ಕಲೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಪ್ರಸಿದ್ಧ ಕಲಾವಿದರಾದ ಸಿ.ಆರ್.ಜಂಬೆ ಈಗಾಗಲೇ ಹೊರ ರಾಜ್ಯಗಳಲ್ಲಿ ಯಶಸ್ವಿಯಾಗಿ ಹಿಂದಿಯಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿದ್ದಾರೆ. ಅವರ ಪ್ರೇರಣೆಯೂ ಉಡುಪಿಯಲ್ಲಿ ಹಿಂದಿ ಯಕ್ಷಗಾನ ಪ್ರಯೋಗದ ಹಿಂದಿದೆ ಎಂದು ಸಂಜೀವ ಸುವರ್ಣ ತಿಳಿಸಿದರು.

ದಶಕಗಳ ಹಿಂದೆಯೇ ಅನ್ಯಭಾಷೆಯ ಕಲಾಸಕ್ತರಿಗೂ ಯಕ್ಷಗಾನ ಮುಟ್ಟಬೇಕು ಎಂಬ ಉದ್ದೇಶದಿಂದ ಕಾರಂತರು ಯಕ್ಷಗಾನದ ಸ್ವರೂಪವನ್ನು ಬದಲಿಸಿದ್ದರು. ಮಾತಿಗೆ ಬದಲಾಗಿ ಬ್ಯಾಲೆಯ ರೂಪದಲ್ಲಿ ಪ್ರದರ್ಶಿಸಿದ್ದರು. ಪ್ರಸ್ತುತ ಯಕ್ಷಗಾನ ಕಲಾಕೇಂದ್ರವು ಸಂಪ್ರಯದಾಯ ಬದ್ಧ ಹಾಗೂ ಭಾವಪ್ರಧಾನವಾಗಿ ಹಿಂದಿಯಲ್ಲಿ ಯಕ್ಷಗಾನ ಪ್ರದರ್ಶಿಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT