ಬ್ರಹ್ಮಾವರ: ಬೇಸಿಗೆ ರಜೆಯ ಬಳಿಕ ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಬೆಂಗ್ರೆ ಅಂಗನವಾಡಿ ಕೇಂದ್ರ ವಿಶಿಷ್ಟ ರೀತಿಯಲ್ಲಿ ಪುನರಾರಂಭಗೊಂಡಿತು.

ಅಂಗನವಾಡಿ ಕೇಂದ್ರದ ಮೊದಲ ದಿನವನ್ನು ಮಕ್ಕಳ ಪಾಲಿಗೆ ಹಬ್ಬದಂತೆ ಮಾಡುವ ಉದ್ದೇಶದಿಂದ ಅಂಗನವಾಡಿ ಕೇಂದ್ರವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಕೇಂದ್ರಕ್ಕೆ ಬಂದ ಪುಟಾಣಿ ಮಕ್ಕಳು ಮತ್ತು ಪೋಷಕರನ್ನು ಶಿಕ್ಷಕಿಯರು ಪುಷ್ಪಸಿಂಚನ, ಆರತಿ ಬೆಳಗಿ ಬರಮಾಡಿಕೊಂಡರು.

ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಕ್ಕಳಿಗೆ ಬಣ್ಣಬಣ್ಣದ ಬಲೂನು, ಸಿಹಿ ತಿಂಡಿ ವಿತರಿಸಿ ಶೈಕ್ಷಣಿಕ ಹಾರೈಸಿದರು. ಮಕ್ಕಳ ನಲಿ– ಕಲಿ, ಆಟ– ಪಾಠದೊಂದಿಗೆ ಮೊದಲ ದಿನದ ಚಟುವಟಿಕೆಗಳು ರಂಗೇರಿದವು.

ಕೋಡಿ ಸಮನ್ವಯ ಸಂಜೀವಿನಿ ಒಕ್ಕೂಟದ ಮಾಜಿ ಅಧ್ಯಕ್ಷೆ ದೀಪಾ ಖಾರ್ವಿ, ಶಾರದಾ ಟಿ. ಕುಂದರ್ ಭಾಗವಹಿಸಿದ್ದರು. ಅಂಗನವಾಡಿ ಶಿಕ್ಷಕಿ ಯಮುನಾ ಎಲ್. ಕುಂದರ್ ನಿರೂಪಿಸಿದರು. ಸಹಾಯಕಿ ಸವಿತಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-28-1872258411

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.