ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಜಿಲ್ಲಾ ಆಸ್ಪತ್ರೆ ವೈದ್ಯರು ಸಿಬ್ಬಂದಿಗೆ ಕೋವಿಡ್‌

53 ಮಂದಿಗೆ ತಗುಲಿದ ಸೋಂಕು: ಇಬ್ಬರು ನಗರಸಭೆ ಸದಸ್ಯರಿಗೂ ಪಾಸಿಟಿವ್‌
Last Updated 15 ಜುಲೈ 2020, 17:44 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲಾ ಆಸ್ಪತ್ರೆಯ ಇಬ್ಬರು ವೈದ್ಯರು, ಇಬ್ಬರು ‘ಡಿ’ ಗ್ರೂಪ್‌ ಸಿಬ್ಬಂದಿ ಹಾಗೂ ಇಬ್ಬರು ನಗರಸಭೆ ಸದಸ್ಯರು ಸೇರಿ ಜಿಲ್ಲೆಯಲ್ಲಿ ಬುಧವಾರ 53 ಮಂದಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದೆ.

ಸೋಂಕಿತ ವೈದ್ಯರ ಹಾಗೂ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕಿತರ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಪಾಸಿಟಿವ್ ಬಂದವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ನೆಗೆಟಿವ್ ಬಂದವರಿಗೆ ಐಸೊಲೇಷನ್‌ ವಾರ್ಡ್‌ನಲ್ಲಿರಿಸಲಾಗಿದೆ. ಆಸ್ಪತ್ರೆಯ ಸರ್ಜರಿ ವಿಭಾಗವನ್ನು ಮುಚ್ಚಲಾಗಿದ್ದು, ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಿದ 2 ದಿನಗಳ ಬಳಿಕ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕಿತರ ಸಂಪರ್ಕಕ್ಕೆ ಬಂದ ಕೆಲವು ರೋಗಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎನ್ನಲಾಗಿದೆ.

ನಗರಸಭೆ ಸದಸ್ಯೆಯರಿಗೆ ಸೋಂಕು:

ಇಬ್ಬರುನಗರಸಭೆ ಸದಸ್ಯರಿಗೂ ಕೋವಿಡ್‌ ಸೋಂಕು ದೃಢಪಟ್ಟಿದ್ದು ಅವರ ಪ್ರಾಥಮಿಕ ಸಂಪರ್ಕಿತರ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ಬುಧವಾರದ ಒಟ್ಟು ಸೋಂಕಿತರಲ್ಲಿ24 ಪುರುಷರು, 22 ಮಹಿಳೆಯರು ಹಾಗೂ 7 ಮಕ್ಕಳು ಇದ್ದಾರೆ. ಮುಂಬೈನಿಂದ ಬಂದಿದ್ದ ಇಬ್ಬರು, ಬೆಂಗಳೂರು ಪ್ರಯಾಣ ಸಂಪರ್ಕ ಇರುವ ಇಬ್ಬರು, ಶೀತಜ್ವರ ಲಕ್ಷಣಗಳಿದ್ದ 16, ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 33 ಜನರಿಗೆ ಸೋಂಕು ತಗುಲಿದೆ. ಎಲ್ಲರನ್ನೂ ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬುಧವಾರ 460 ಜನರ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, 655 ವರದಿಗಳು ಬರಲು ಬಾಕಿ ಇವೆ. ಸೋಂಕಿನ ಲಕ್ಷಣಗಳು ಕಂಡುಬಂದ 21 ಜನರನ್ನು ಐಸೊಲೇಷನ್‌ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT