ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನಿನ್ನೂ ಯುವಕ: ಸಚಿವ ಉಮೇಶ್ ಕತ್ತಿ

Last Updated 7 ಮೇ 2022, 9:44 IST
ಅಕ್ಷರ ಗಾತ್ರ

ಉಡುಪಿ: ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾದಾಗಲೆಲ್ಲ ರಾಜ್ಯವನ್ನು ಒಡೆಯುವ ಹೇಳಿಕೆ ನೀಡಿದ್ದೇನೆ. ಮುಂದೆ ಅನ್ಯಾಯವಾದರೂ ಪ್ರತ್ಯೇಕ ರಾಜ್ಯಕ್ಕಾಗಿ ಮತ್ತೆ ಹೋರಾಟ ಮಾಡುತ್ತೇನೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು.

ಬ್ರಹ್ಮಾವರದ ನೀಲಾವರದಲ್ಲಿ ಮಾತನಾಡಿದ ಸಚಿವರು, ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಕಳು, ಹೋರಿ ಸತ್ತರೆ ಮಾತ್ರ ಪರಿಹಾರ ನೀಡಿ, ಎಮ್ಮೆ, ಕೋಣ ಸತ್ತರೆ ಪರಿಹಾರ ನೀಡುತ್ತಿರಲಿಲ್ಲ. ಇದರಿಂದ ಎಮ್ಮೆ ಹಾಗೂ ಕೋಣಗಳನ್ನು ಹೆಚ್ಚು ಸಾಕಲಾಗುತ್ತಿದ್ದ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗುತ್ತಿತ್ತು. ಇದನ್ನು ಖಂಡಿಸಿ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸಿದ್ದೆ ಎಂದು ಸಚಿವ ಕತ್ತಿ ಹೇಳಿದರು.

ಸದ್ಯ ತಾರತಮ್ಯ ನಿವಾರಣೆಯಾಗಿರುವುದರಿಂದ ಪ್ರತ್ಯೇಕ ರಾಜ್ಯದ ಬೇಡಿಕೆ ಇರಿಸುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಹೋಗೋಣ, ಕರ್ನಾಟಕವನ್ನು ಕಟ್ಟೋಣ ಎಂದರು.

ನಾನಿನ್ನೂ ಯುವಕ

ಮುಖ್ಯಮಂತ್ರಿ ಸ್ಥಾನಕ್ಕೆ ಆಸೆಪಟ್ಟು ಕುರ್ಚಿಯ ಹಿಂದೆ ಬಿದ್ದಿಲ್ಲ. 9 ಬಾರಿ ಚುನಾವಣೆಯಲ್ಲಿ ಗೆದ್ದಿದ್ದು, ಮುಖ್ಯಮಂತ್ರಿ ಸ್ಥಾನ ಒಲಿದು ಬಂದರೆ ಸ್ವೀಕರಿಸುತ್ತೇನೆ. ಸದ್ಯ 61 ವರ್ಷ ತುಂಬಿದ್ದು, 75 ವರ್ಷವಾಗುವವರೆಗೂ ಯುವಕನಾಗಿಯೇ ಇರುತ್ತೇನೆ. ರಾಜ್ಯದ ಜನರ ಆಶೀರ್ವಾದ ಹಾಗೂ ದೇವರ ದಯೆ ಇದ್ದರೆ ಮುಂದೆ ಖಂಡಿತವಾಗಿ ಮುಖ್ಯಮಂತ್ರಿ ಆಗುತ್ತೇನೆ. ಈಗಲೇ ಸಿಎಂ ಆಗಬೇಕು ಎಂಬ ತುರ್ತು ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT