ಅಕ್ರಮ ಜಾನುವಾರು ಸಾಗಾಟ :

7

ಅಕ್ರಮ ಜಾನುವಾರು ಸಾಗಾಟ :

Published:
Updated:
Deccan Herald

ಬೈಂದೂರು: ಸೋಮವಾರ ನಸುಕಿನ ಹೊತ್ತು ಎಸ್‌ಐ ಬಿ.ಎನ್. ತಿಮ್ಮೇಶ್ ಮತ್ತು ಸಿಬ್ಬಂದಿ ಶಿರೂರು ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಬೈಂದೂರು ಕಡೆಯಿಂದ ಭಟ್ಕಳದತ್ತ ಎರಡು ಕಂಟೈನರ್ ವಾಹನಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವುದನ್ನು ತಡೆದು ಕ್ರಮ ತೆಗೆದುಕೊಂಡರು.

ಒಂದು ವಾಹನದಲ್ಲಿ 10 ಮತ್ತು ಇನ್ನೊಂದರಲ್ಲಿ 9 ಹಿಂಸಾತ್ಮಕವಾಗಿ ಕಟ್ಟಿಹಾಕಿದ್ದ ಜಾನುವಾರುಗಳಿದ್ದವು. ವಾಹನಗಳಲ್ಲಿದ್ದ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ಮೆಹಬೂಬ್ (25), ಅಜಾದ್ ನಗರದ ತನ್ವೀರ್ ಸಾಬ್ (24), ಕುಕ್ಕವಾಡದ ನಾಗರಾಜ (40), ಹರಪನಹಳ್ಳಿಯ ಜಾವೇದ್ (20), ಭಟ್ಕಳದ ಇಕ್ಕೇರಿ ಇಸ್ತಿಯಾರ್ ಅಹಮದ್(37) ಈ ಜಾನುವಾರುಗಳನ್ನು ಹಾನಗಲ್ ಹಾಗೂ ಸಿಂಧಗಿಯ ಎಪಿಎಂಸಿ ಮಾರುಕಟ್ಟೆಯಿಂದ ಖರೀದಿಸಿದ್ದು ಎಂದು ಹೇಳಿ ಕ್ರಯಪತ್ರವನ್ನು ಹಾಜರುಪಡಿಸಿದರು. ಆದರೆ ಸಾಗಾಟಕ್ಕೆ ಪರವಾನಗಿ ಹೊಂದಿಲ್ಲದ ಕಾರಣ ಮತ್ತು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಭಟ್ಕಳ ಮೂಲಕ ಗೋವಾಕ್ಕೆ ಸಾಗಿಸಲಾಗುತ್ತಿತ್ತು ಎಂದು ಹೇಳಿದ್ದರಿಂದ ಅವರನ್ನು, ಜಾನುವಾರುಗಳನ್ನು ಮತ್ತು ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !