ಉಡುಪಿ: ಭಾರತೀಯ ಕಲೆಗಳು ಬಹು ಶ್ರೇಷ್ಠವಾಗಿವೆ. ಅವುಗಳಲ್ಲೂ ಉಪಯೋಗಿ ಕಲೆಗಳು ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿ ನಮ್ಮ ಸೌಂದರ್ಯ ಪ್ರಜ್ಞೆಯನ್ನು ಬಿಂಬಿಸುವಂಥವು ಎಂದು ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆ್ಯಂಡ್ ಪ್ಲಾನಿಂಗ್ನ ಸಹ ಪ್ರಾಧ್ಯಾಪಕ ತ್ರಿವಿಕ್ರಮ್ ಭಟ್ ಅಭಿಪ್ರಾಯಪಟ್ಟರು.

ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೊ ವತಿಯಿಂದ ಮಣಿಪಾಲ ವಿಶ್ವವಿದ್ಯಾಲಯ, ಹಟ್ಟಿಯಂಗಡಿಯ ಸಿದ್ಧಿವಿನಾಯಕ ರಿಸಿಡೆನ್ಸಿಯಲ್ ಸ್ಕೂಲ್ ಸಹಯೋಗದಲ್ಲಿ ಬಡಗುಪೇಟೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚನ್ನಪಟ್ಟಣದ ಗೊಂಬೆ ತಯಾರಿಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಚನ್ನಪಟ್ಟಣದಂತಹ ವಿಶೇಷ ಕಲೆ ಪ್ಲಾಸ್ಟಿಕ್ ಆಟಿಕೆಗಳಿಗೆ ಇಂದು ಸಡ್ಡು ಹೊಡೆದು ನಿಂತಿರುವುದು ಮತ್ತು ಕಾರ್ಯಾಗಾರವು ಉಡುಪಿಯಲ್ಲಿ ಆಯೋಜನೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಸುಕನ್ಯಾ ನೀಲಸಂದ್ರ, ಸುಂದ್ರಕಲಾ ಅವರು ಆಟಿಕೆಗಳ ಉಪಯುಕ್ತತೆ, ತಾಂತ್ರಿಕತೆಯನ್ನು ವಿವರಿಸಿದರು.

ಟಿಪ್ಪು ಸುಲ್ತಾನ್ ಕಾಲದಲ್ಲಿ ಪರ್ಶಿಯನ್ ಆಟಿಕೆಗಳ ಪ್ರಭಾವದಿಂದ ಚನ್ನಪಟ್ಟಣದಲ್ಲಿ ಬೆಳೆದು ಬಂದಿರುವ ಈ ಕಲೆ ಇಂದಿಗೆ ವಿಶ್ವದಾದ್ಯಂತ ಬಹು ಮನ್ನಣೆ ಗಳಿಸುತ್ತಿದೆ. ಹಗುರವಾದ ಮರದಿಂದ ನೈಸರ್ಗಿಕ ವರ್ಣದಲ್ಲಿ ತಯಾರಿಸಲಾಗುವ ಆಟಿಕೆಗಳು ಬಹು ಉಪಯುಕ್ತವಾಗಿವೆ ಎಂದು ಹೇಳಿದರು.

ಕಾರ್ಯಾಗಾರದ ಸಂಯೋಜಕ ಜನಾರ್ದನ ಹಾವಂಜೆ ಮಾತನಾಡಿ, ಕರಾವಳಿಯ ಕಲಾಸಕ್ತರು ದೇಶೀಯ ಕಲೆಗಳ ಬಗ್ಗೆ ಅರಿವು ಹೊಂದಿ, ಅದರ ಹಿಂದಿನ ಇತಿಹಾಸ, ಶ್ರಮ, ತಾಂತ್ರಿಕತೆಯನ್ನು ತಿಳಿದುಕೊಳ್ಳಬೇಕೆಂಬುದು ಕಾರ್ಯಾಗಾರದ ಉದ್ದೇಶ ಎಂದರು.

ಫೌಂಡೇಷನ್ ಅಧ್ಯಕ್ಷ, ಯಕ್ಷಗುರು ಹಾವಂಜೆ ಮಂಜುನಾಥ ರಾವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.