ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ವಿಕ್ರಮ: ಇಸ್ರೋ ನಿವೃತ್ತ ವಿಜ್ಞಾನಿ ಪಿ.ಜೆ.ಭಟ್‌

ಜಗತ್ತಿನ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ: ಇಸ್ರೋ ಸಾಧನೆಗೆ ಜಗತ್ತು ನಿಬ್ಬೆರಗು
Last Updated 26 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಉಡುಪಿ: ಇಸ್ರೋ ಆರಂಭದ ದಿನಗಳಲ್ಲಿ ಉಡಾಯಿಸಿದ ಹೆಚ್ಚಿನ ರಾಕೆಟ್‌ಗಳು ವೈಫಲ್ಯ ಕಂಡವು. ಅಂದಿನ ಸೋಲು ಕಲಿಸಿದ ಪಾಠದಿಂದ ಭಾರತ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಜ್ಜೆಗುರತುಗಳನ್ನು ಮೂಡಿಸಲು ಸಾಧ್ಯವಾಗಿದೆ ಎಂದು ಇಸ್ರೋ ನಿವೃತ್ತ ವಿಜ್ಞಾನಿ ಪಿ.ಜೆ.ಭಟ್‌ ಹೇಳಿದರು.

ಪಿಪಿಸಿ ಕಾಲೇಜಿನಲ್ಲಿ ಗುರುವಾರ ಗ್ರಹಣ ವೀಕ್ಷಣೆ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಸ್ರೋ ಎಂದರೆ ಕೇವಲ ಚಂದ್ರಯಾನ, ಮಂಗಳಯಾನ ಮಾತ್ರವಲ್ಲ; ಭಾರತದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಸ್ಥೆ ಎಂದರು.

ಅಮೇರಿಕಾ, ರಷ್ಯಾ ಬಾಹ್ಯಾಕಾಶದ ಮೇಲೆ ಪ್ರಭುತ್ವ ಸಾಧಿಸಲು ಹೊರಟಿದ್ದ ಕಾಲಘಟ್ಟದಲ್ಲಿ ತಿರುವನಂತಪುರದ ತುಂಬೆಯಲ್ಲಿ ಇಸ್ರೋ ಸ್ಥಾಪನೆಯಾಯಿತು. ಅಂದು ಕೆಲವೇ ಲಕ್ಷಗಳ ವಾರ್ಷಿಕ ಬಜೆಟ್‌ ಪ್ರಸ್ತುತ ₹ 10,000 ಕೋಟಿ ಮುಟ್ಟಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದ್ದ ಭಾರತ ಪ್ರಸ್ತುತ ವಿಶ್ವದ 6 ಮುಂಚೂಣಿ ರಾಷ್ಟ್ರಗಳ ಪೈಕಿ ಒಂದಾಗಿದೆ ಎಂದರು.

ಮೊಬೈಲ್‌, ಡಿಷ್‌ ಟಿವಿ, ಷೇರು ಮಾರುಕಟ್ಟೆ, ಬ್ಯಾಂಕಿಂಗ್ ವ್ಯವಸ್ಥೆ ಸೇರಿದಂತೆ ತಂತ್ರಜ್ಞಾನ ಆಧಾರಿತ ಎಲ್ಲ ಕ್ಷೇತ್ರಗಳು ಇಸ್ರೋ ಉಪಗ್ರಹಗಳ ಮೇಲೆ ಅವಲಂಬಿತವಾಗಿವೆ. ಹವಾಮಾನ ಮುನ್ಸೂಚನೆ, ಸಮುದ್ರದಲ್ಲಿ ಮೀನುಗಳ ಲಭ್ಯತೆ, ಪ್ರಾಕೃತಿಕ ವಿಕೋಪಗಳ ಕುರಿತು ಮುನ್ನೆಚ್ಚರಿಕೆಯನ್ನು ನೀಡುತ್ತಿರುವ ಕೆಲಸವನ್ನು ಇಸ್ರೋ ಉಪಗ್ರಹಗಳು ಮಾಡುತ್ತಿವೆ ಎಂದರು.

ಇಸ್ರೋ ಆರಂಭದಲ್ಲಿ ಉಡಾಯಿಸಿದ ಎಸ್‌ಎಲ್‌ವಿ–3 ಹಾಗೂ ಎಎಸ್‌ಎಲ್‌ವಿ ಉಪಗ್ರಹಗಳು ವೈಫಲ್ಯ ಅನುಭವಿಸಿದ್ದೇ ಹೆಚ್ಚು. ಬಳಿಕಪಿಎಸ್‌ಎಲ್‌ವಿ ಹಾಗೂ ಜಿಎಸ್‌ಎಲ್‌ವಿ ಹಂತದಲ್ಲಿ ಇಸ್ರೋ ಪರಾಕ್ರಮ ಮೆರೆದಿದ್ದು ಹೆಚ್ಚು ಇದುವರೆಗೂ ಇಸ್ರೋ ಉಡಾವಣೆ ಮಾಡಿರುವ 50 ಪಿಎಸ್‌ಎಲ್‌ವಿಗಳ ಪೈಕಿ 48 ಯಶಸ್ವಿಯಾಗಿವೆ. ಫೆ.15, 2007ರಲ್ಲಿ ದಾಖಲೆಯ 104 ಸ್ಯಾಟಲೈಟ್‌ಗಳನ್ನು ಪಿಎಸ್‌ಎಲ್‌ವಿ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಇವುಗಳಲ್ಲಿ ವಿದೇಶಿ ಉಪಗ್ರಹಗಳೂ ಸೇರಿವೆ. ಜಿಎಲ್‌ಎಲ್‌ವಿಯ 13 ಸ್ಯಾಟಲೈಟ್‌ಗಳಲ್ಲಿ 10 ಯಶಸ್ವಿಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿಬಿ.ಕೆ.ನಿವೇದಿತಾ,ಪಿಪಿಸಿ ಕಾಲೇಜು ಪ್ರಾಂಶುಪಾಲ ರಾಘವೇಂದ್ರ, ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಚಾಲಕ ಅತುಲ್ ಭಟ್‌, ಭೌತಶಾಸ್ತ್ರ ವಿಭಾಗದ ಸಿಬ್ಬಂದಿ ದಿವ್ಯಾ ವಸಂತ್ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT