ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆದ ತಿರಂಗ ಯಾತ್ರೆ

ಅಲ್ಲಲ್ಲಿ ಸ್ವಾತಂತ್ರ್ಯೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗ ಸನ್ಮಾನ
Last Updated 15 ಆಗಸ್ಟ್ 2022, 14:03 IST
ಅಕ್ಷರ ಗಾತ್ರ

ಉಡುಪಿ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಬಿಜೆಪಿ ಕಚೇರಿಯಿಂದ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್‌ವರೆಗೆ 75 ಮೀಟರ್ ಉದ್ದದ 'ಬೃಹತ್ ತಿರಂಗಾ ಯಾತ್ರೆ' ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕ ಕೆ.ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ‌ ಕೆ. ಉದಯ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಅರ್.ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ,‌ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ ಇದ್ದರು.

ಉಡುಪಿಯ ಕುಮಾರ ಕೃಪಾ ಕಚೇರಿಯಲ್ಲಿ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಧ್ವಜಾರೋಹಣ ಮಾಡಿದರು. ಮುಖಂಡರಾದ ವಾಸುದೇವ ರಾವ್, ಜಯಕುಮಾರ್ ಪರ್ಕಳ, ಜಯರಾಮ ಆಚಾರ್ಯ, ಗಂಗಾಧರ ಬಿರ್ತಿ, ಶಾಲಿನಿ ಬಿ.ಶೆಟ್ಟಿ ಕೆಂಚನೂರು, ಮನ್ಸೂರ್ ಇಬ್ರಾಹಿಂ, ಸಂಕಪ್ಪ, ಚಂದ್ರಹಾಸ್ ಎಮ್ರಾಳು, ಉಮೇಶ್ ಕರ್ಕೇರ, ಸಂಜಯ್ ಕುಮಾರ್ ಇದ್ದರು.

ಮಣಿಪಾಲದ ಮಾಹೆಯಲ್ಲಿ 76ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಎಸ್‌.ಬಲ್ಲಾಳ್‌ ನೆರವೇರಿಸಿದರು. ಕುಲಪತಿ ಡಾ.ಎಂ.ಡಿ.ವೆಂಕಟೇಶ್, ಡಾ.ಉಲ್ಲಾಸ್‌ ಕಾಮತ್‌, ಧನುಷ್ ಚಿನಿವಾರ್ ಇದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ರೆಡ್ ಕ್ರಾಸ್ ಭವನದಲ್ಲಿ ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಧ್ವಜಾರೋಹಣ ಮಾಡಿದರು. ಹಲವರಿಗೆ ದಿನಬಳಕೆ ವಸ್ತುಗಳನ್ನು ವಿತರಿಸಲಾಯಿತು.

ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೊರಂಗ್ರಪಾಡಿ ವ್ಯವಸಾಯಿಕ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖರ ಸುವರ್ಣ ಮಾರ್ಪಳ್ಳಿ ಧ್ವಜಾರೋಹಣ ನೆರವೇರಿಸಿದರು. ಶಾಲಾ ಸಂಚಾಲಕ ಅಲೆವೂರು ದಿನೇಶ ಕಿಣಿ, ಮುಖ್ಯೋಪಾಧ್ಯಾಯಿನಿ ರೂಪಾ ಡಿ. ಕಿಣಿ ಇದ್ದರು.

ಕುಂಜಿಬೆಟ್ಟು ಕಟ್ಟೆ ಆಚಾರ್ಯ ಮಾರ್ಗದಲ್ಲಿರುವ ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ದ್ವಜಾರೋಹಣ ಮಾಡಿದರು. ಎಎಸ್‌ಪಿ ಎಸ್.ಟಿ.ಸಿದ್ದಲಿಂಗಪ್ಪ, ಆರ್ಟ್ ಗ್ಯಾಲರಿ ಸ್ಥಾಪಕ ಲಿಯಾಕತ್ ಅಲಿ, ನರಸಿಂಹ ಮೂರ್ತಿ, ಇನ್‌ಸ್ಪೆಕ್ಟರ್ ಮಂಜುನಾಥ, ರಾಘವೇಂದ್ರ ಪ್ರಭು ಕರ್ವಾಲ್ ಇದ್ದರು.

ಉದ್ಯಾವರದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ 76ನೇ ಸ್ವಾತಂತ್ರ್ಯೋತ್ಸವದಲ್ಲಿ ನಿವೃತ್ತ ಕರ್ನಲ್ ತಮ್ಮಯ್ಯ ಉಡುಪ ಧ್ವಜಾರೋಹಣ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಭರತೇಶ್ ಆಧಿರಾಜಯ್ಯ, ಸಂಘದ ಪದಾಧಿಕಾರಿ ಡಾ. ಶರದ್ ಕುಮಾರ್ ಪ್ರಜಾಪತಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಸ್‌.ನಾಗರಾಜ್, ಸ್ನಾತಕೋತ್ತರ ವಿಭಾಗದ ಡೀನ್ ಡಾ. ನಿರಂಜನ್ ರಾವ್ ಇದ್ದರು.

ವಿದ್ಯೋದಯ ಪಬ್ಲಿಕ್ ಸ್ಕೂಲ್, ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ವಿದ್ಯೋದಯ ವಿದ್ಯಾಲಯ, ಶ್ರೀಕೃಷ್ಣ ಶಿಶುಮಂದಿರಗಳಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ನೇತಾಜಿ ಸ್ಪೋರ್ಟ್ಸ್‌ ಕ್ಲಬ್ ಪರ್ಕಳದಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಮಾಹೆ ಉಪ ಕುಲಸಚಿವ ರಾಘವೇಂದ್ರ ಪ್ರಭು ಧ್ವಜಾರೋಹಣ ಮಾಡಿದರು. ಅಂತರ ರಾಷ್ಟ್ರೀಯ ಮಾಸ್ಟರ್ ಕ್ರೀಡಾಪಟು ಹೇಮಲತಾ ವಾಗ್, ಆರೋಗ್ಯ ಕಾರ್ಯಕರ್ತೆ ಮಮತಾ ಶಂಕರ್ ಕುಲಾಲ್, ಡಾ.ರಾಘವೇಂದ್ರ ಪ್ರಭು ಅವರನ್ನು ಗೌರವಿಸಲಾಯಿತು.

ವಿದ್ಯಾ ವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ವಸಂತಿ ಶೆಟ್ಟಿ ಧ್ವಜಾರೋಹಣ ಮಾಡಿದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಿ.ಐ.ನಳಿನಿ, ಮುಖ್ಯ ಗ್ರಂಥಾಲಯಾಧಿಕಾರಿ ಎಂ.ಜಯಶ್ರೀ, ಗ್ರಂಥಪಾಲಕಿ ರಂಜಿತ ಇದ್ದರು.

ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಮಣಿಪಾಲ ವೃತ್ತ ಜಿಎಂ ಕೆ.ರಾಮಾನಾಯ್ಕ್, ಡಿಜಿಎಂಗಳಾದ ಸತ್ಯ ನಾರಾಯಣ, ಪಿ.ಪದ್ಮಾವತಿ, ರಾಜೀವ್ ತುಕ್ರಾಲ್, ಧರಮ್ ಬೀರ್, ಮಿಣಿ ಇದ್ದರು.

ವಿಮಾ ನೌಕರರ ಸಂಘ ಉಡುಪಿ ವಿಬಾಗದ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಲಿಕೋ ಬ್ಯಾಂಕ್‌ ಅಧ್ಯಕ್ಷ ಕೆ.ಕೃಷ್ಣ ಧ್ವಜಾರೋಹಣ ಮಾಡಿದರು. ಪ್ರಾಧ್ಯಾಪಕ ಶಶಿಕಾಂತ್ ಕೌಡೂರು ಉಪನ್ಯಾಸ ನೀಡಿದರು.

ಸಿಐಟಿಯು ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಂಘದ ಅಧ್ಯಕ್ಷ ಕೆ.ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ.ಕುಂದರ್, ಮಹಿಳಾ ಸಂಚಾಲಕಿ ನಿರ್ಮಲ, ಪಿಂಚಣಿದಾರರ ಸಂಘದ ಪ್ರಧಾನ ಕಾರ್ಯದರ್ಶಿ ವಿಠಲಮೂರ್ತಿ ಆಚಾರ್ಯ, ಡೆರಿಕ್ ರೆಬೆಲ್ಲೋ ಇದ್ದರು.

ನಾಗೂರು ಕೊಡೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರಿಯರಾದ ವಾಸುದೇವ ಕಾರಂತ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕಿ ಶ್ಯಾಮಲಾ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಖಾರ್ವಿ ಹುಣ್ಸೆೆಡಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ಪೂಜಾರಿ, ಪ್ರಮುಖರಾದ ಸಿ.ಎಸ್.ಖಾರ್ವಿ, ಮಂಜುನಾಥ ಇದ್ದರು.

ಉಡುಪಿ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಧ್ವಜಾರೋಹಣ ಮಾಡಿದರು.

ಉಡುಪಿ ಜಾಮಿಯಾ ಮಸೀದಿ ವಠಾರದಲ್ಲಿ ಖತೀಬ್‌ರಾದ ಮೌಲಾನ ರಶೀದ್ ಅಹಮದ್ ನದ್ವಿ ಧ್ವಜಾರೋಹಣ ಮಾಡಿದರು. ಮಸೀದಿ ಅಧ್ಯಕ್ಷ ಮಹಮದ್ ಅರ್ಷದ್, ಪ್ರಧಾನ ಕಾರ್ಯದರ್ಶಿ ವಿ.ಎಸ್.ಉಮರ್ ಇದ್ದರು.

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೈದರಾಬಾದ್‌ನ ನೃಪತುಂಗ ಶಾಲೆಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT