ಶನಿವಾರ, ನವೆಂಬರ್ 23, 2019
17 °C

ಕೆಟ್ಟುನಿಂತ ವಿದ್ಯುತ್ ದೀಪ ಸರಿಪಡಿಸಲು ವಿನೂತನ ಪ್ರತಿಭಟನೆ

Published:
Updated:
Prajavani

ಉಡುಪಿ: ನಗರದ ಕುಕ್ಕಿಕಟ್ಟೆ ಬಳಿಯ ಹೈಮಾಸ್ಟ್‌ ವಿದ್ಯುತ್ ದೀಪ ಕೆಟ್ಟುನಿಂತು ದುರಸ್ತಿ ಮಾಡುವಂತೆ ನಗರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಲ್ಲಿನ ನಾಗರಿಕರು ಸೋಮವಾರ ರಾತ್ರಿ ವಿದ್ಯುತ್ ಕಂಬಕ್ಕ ಗ್ಯಾಸ್‌ ಲೈಟ್‌ ಕಟ್ಟಿ ವಿನೂತನ ಪ್ರತಿಭಟನೆ ನಡೆಸಿದರು.

ಗ್ಯಾಸ್‌ ಲೈಟ್‌ ಕಟ್ಟಿ ಅದರ ಕೆಳಗೆ ‘ಸಾರ್ವಜನಿಕರ ಅನುಕೂಲಕ್ಕಾಗಿ ಗ್ಯಾಸ್ ದೀಪದ ವ್ಯವಸ್ಥೆ ಮಾಡಲಾಗಿದೆ, ದಯವಿಟ್ಟು ಸಹಕರಿಸಿ’ ಎಂಬ ಬೋರ್ಡ್‌ ಬರೆಸಿ ತೂಗು ಹಾಕಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಮಂಗಳವಾರ ನಗರಸಭೆ ಅಧಿಕಾರಿಗಳು ಹೈಮಾಸ್ಟ್ ದೀಪವನ್ನು ದುರಸ್ತಿಗೊಳಿಸಿದರು.

 

ಪ್ರತಿಕ್ರಿಯಿಸಿ (+)