ಶಿರೂರು ಪಟ್ಟದ ದೇವರಿಗೆ ಸೋದೆ ಸ್ವಾಮೀಜಿ ಪೂಜೆ

7
ಉತ್ತರ ಕನ್ನಡ ಜಿಲ್ಲೆಯ ಸೋದೆಯಲ್ಲಿ ಚಾತುರ್ಮಾಸ್ಯ

ಶಿರೂರು ಪಟ್ಟದ ದೇವರಿಗೆ ಸೋದೆ ಸ್ವಾಮೀಜಿ ಪೂಜೆ

Published:
Updated:
Deccan Herald

ಉಡುಪಿ: ಶಿರೂರು ಮಠದ ಪಟ್ಟದ ದೇವರನ್ನು ವಶಕ್ಕೆ ಪಡೆದುಕೊಂಡಿರುವ ಸೋದೆ ಮಠದ ವಿಶ್ವವಲ್ಲಭ ತೀರ್ಥರು ಉತ್ತರ ಕನ್ನಡ ಜಿಲ್ಲೆಯ ಸೋದೆಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ.

ಚಾತುರ್ಮಾಸ್ಯದ ಸಂದರ್ಭ ಪಟ್ಟದ ದೇವರಿಗೆ ಪೂಜೆ ತಪ್ಪಿಹೋಗಬಾರದು ಎಂಬ ಕಾರಣಕ್ಕೆ ಪರ್ಯಾಯ ಪಲಿಮಾರು ವಿದ್ಯಾಧೀಶ ತೀರ್ಥರು ತಮ್ಮ ಸುಪರ್ದಿಯಲ್ಲಿದ್ದ ಶಿರೂರು ಮಠದ ಪಟ್ಟದ ದೇವರಾದ ವಿಠಲ ದೇವರನ್ನು ಸೋದೆ ಶ್ರೀಗಳಿಗೆ ಹಸ್ತಾಂತರಿಸಿದ್ದರು.  

ವಿಶ್ವವಲ್ಲಭ ತೀರ್ಥರು ಸೋದೆ ಕ್ಷೇತ್ರದಲ್ಲಿ ಸೆ.25ರವರೆಗೆ ಚಾತುರ್ಮಾಸ್ಯವ್ರತದಲ್ಲಿ ನಿರತರಾಗಲಿದ್ದು, ಈ ವೇಳೆ ಸೋದೆ ಮಠದ ಪಟ್ಟದ ದೇವರ ಜತೆಗೆ ಶೀರೂರು ಮಠದ ಪಟ್ಟದ ದೇವರಿಗೂ ಪೂಜೆ ಸಲ್ಲಿಸಲಿದ್ದಾರೆ. ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕವಾಗುವವರೆಗೂ ಪಟ್ಟದ ದೇವರಿಗೆ ಸೋದೆ ಮಠದಲ್ಲಿಯೇ ಪೂಜೆ ನಡೆಯಲಿದೆ ಎಂದು ಮಠದ ಆಪ್ತ ಮೂಲಗಳು ತಿಳಿಸಿವೆ.

ಹಿಂದೆ, ಪಟ್ಟದ ದೇವರು ಹಸ್ತಾಂತರ ವಿಚಾರವಾಗಿ ಶಿರೂರು ಶ್ರೀ ಹಾಗೂ ಕೃಷ್ಣಮಠದ 6 ಯತಿಗಳ ಮಧ್ಯೆ ವೈಮನಸ್ಸು ಉಂಟಾಗಿತ್ತು. ಈ ವಿಚಾರವಾಗಿ ಶಿರೂರು ಶ್ರೀಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಶಿಷ್ಯ ಸ್ವೀಕಾರ ಮಾಡದ ಹೊರತು ಪಟ್ಟದ ದೇವರನ್ನು ಹಸ್ತಾಂತರ ಮಾಡುವುದಿಲ್ಲ ಎಂದು ಯತಿಗಳು ಪಟ್ಟು ಹಿಡಿದಿದ್ದರು.

ಈ ಬೆಳವಣಿಗೆಗಳ ಮಧ್ಯೆಯೇ ಜುಲೈ19ರಂದು ಶಿರೂರು ಶ್ರೀಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಶಿರೂರು ಮಠವು ಸೋದೆ ಮಠದ ಸುಪರ್ದಿಗೆ ಬಂದಿರುವ ಹಿನ್ನೆಲೆಯಲ್ಲಿ ಪಟ್ಟದ ದೇವರಿಗೆ ವಿಶ್ವವಲ್ಲಭ ಶ್ರೀಗಳು ಪೂಜೆ ನೆರವೇರಿಸುತ್ತಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !