ಬುಧವಾರ, ಆಗಸ್ಟ್ 10, 2022
20 °C
ಜಿಲ್ಲಾ ಜೆಡಿಎಸ್‌ ಘಟಕದ ಅಧ್ಯಕ್ಷ ಯೋಗೀಶ್ ಶೆಟ್ಟಿ ನೇತೃತ್ವದಲ್ಲಿ ಸಭೆ

ಉಡುಪಿ: ಜಿ.ಪಂ. ತಾ.ಪಂ ಚುನಾವಣೆ ಕುರಿತು ಜೆಡಿಎಸ್‌ ಸಮಾಲೋಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಯಿತು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಮಾತನಾಡಿ, ಅಧಿಕಾರದಾಸೆಗೆ ಎರಡು ರಾಷ್ಟ್ರೀಯ ಪಕ್ಷಗಳು ಕಚ್ಚಾಡುತ್ತಿದ್ದು, ಕೋವಿಡ್‌ ಸಂದರ್ಭ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸಿಲ್ಲ. ಮುಂಬರುವ ಚುನಾವಣೆಯಲ್ಲಿ ಮತದಾರರು ರಾಷ್ಟ್ರೀಯ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದರು.

ರೈತರ ಸಾಲ ಮನ್ನಾ, ನಾಯಕರ ರೈತರ ಪರ ಕಾಳಜಿ, ಮಹಿಳೆಯರಗೆ ಮೀಸಲಾತಿ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಜನರಿಗೆ ತಿಳಿಹೇಳುವ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಬೇಕಿದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗಳನ್ನು ಕಣಕ್ಕೆ ನಿಲ್ಲಿಸಿ ಪಕ್ಷದ ಬಲ ಪ್ರದರ್ಶಿಸಬೇಕು ಎಂದರು.

ಕಾರ್ಯಾಧ್ಯಕ್ಷ ವಾಸುದೇವ ರಾವ್ ಚುನಾವಣೆ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಪಕ್ಷಕ್ಕೆ ಉಸ್ತುವಾರಿಗಳನ್ನು ನೇಮಿಸಲಾಯಿತು. ಮೊಗವೀರ ಸಮಾಜದ ಸಂಘಟಕ ರಾಜು ಆರ್. ಪುತ್ರನ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

ಸಭೆಯಲ್ಲಿ ಜಯರಾಮ ಆಚಾರ್ಯ, ಸುಧಾಕರ ಶೆಟ್ಟಿ, ಇಸ್ಮಾಯಿಲ್ ಪಲಿಮಾರ್, ಕಿಶೋರ್ ಬಲ್ಲಾಳ್, ಶ್ರೀಕಾಂತ ಹೆಬ್ರಿ, ಬಾಲಕೃಷ್ಣ ಆಚಾರ್ಯ ಕಬ್ಬೆಟ್ಟು, ರಮೇಶ್ ಕುಂದಾಪುರ, ಬರ್ಬೋಜಾ, ಅಬ್ಬಾಸ್ ಹಾಜಿ, ಉದಯ ಶೆಟ್ಟಿ, ಅಬ್ದುಲ್ ರಜಾಕ್ ಉಚ್ಚಿಲ ಇದ್ದರು.

ಉಸ್ತುವಾರಿ ನೇಮಕ

ಉಡುಪಿ–ಬಾಲಕೃಷ್ಣ ಆಚಾರ್ಯ ಕಬ್ಬೆಟ್ಟು, ದಕ್ಷತ್ ಆರ್.ಶೆಟ್ಟಿ, ಜಯಕುಮಾರ್ ಪರ್ಕಳ, ಗಂಗಾಧರ ಬಿರ್ತಿ, ಶಾಲಿನಿ ಬಿ.ಶೆಟ್ಟಿ ಕೆಂಚನೂರು. ಕುಂದಾಪುರ– ಸಬ್ಲಾಡಿ ಮಂಜಯ್ಯ ಶೆಟ್ಟಿ, ಕಿಶೋರ್ ಬಳ್ಳಾಲ್‌, ಹುಸೇನ್ ಹೈಕಾಡಿ, ರಮೇಶ್ ಕುಂದಾಪುರ, ರಾಬರ್ಟ್ ಡಿಸೋಜಾ, ಶಂಶುದ್ದೀನ್. ಬೈಂದೂರು–ಸಂದೇಶ್ ಭಟ್, ಶ್ರೀಕಾಂತ ಅಡಿಗ, ಮನ್ಸೂರ್ ಇಬ್ರಾಹಿಂ, ನಿತಿನ್ ಶೆಟ್ಟಿ, ಜಯಶೀಲ ಶೆಟ್ಟಿ, ಬಿ.ಟಿ.ಮಂಜುನಾಥ್, ಗುರುರಾಜ್ ಶೆಟ್ಟಿ. ಕಾಪು–ವಾಸುದೇವರಾವ್, ಸುಧಾಕರ ಶೆಟ್ಟಿ, ಸೈಯದ್ ಶಾಹಿದ್, ಇಸ್ಮಾಯಿಲ್ ಪಲಿಮಾರು, ಉದಯ ಹೆಗ್ಡೆ, ಚಂದ್ರಹಾಸ ಎರ್ಮಾಳು, ಅಬ್ದುಲ್ ಹಮೀದ್ ಯೂಸುಫ್, ವಿನ್ಸೆಂಟ್ ಅಲ್ಮೇಡಾ, ಬಿ.ಕೆ.ಮಹಮ್ಮದ್, ಕಾಪು ಉತ್ತರ–ಇಕ್ಬಾಲ್ ಅತ್ರಾಡಿ, ಪ್ರಕಾಶ್ ಶೆಟ್ಟಿ ಬೆಳ್ಳಂಪಳ್ಳಿ, ಜಯರಾಮ ಆಚಾರ್ಯ, ಅಬ್ದುಲ್ ರಜಾಕ್ ಉಚ್ಚಿಲ, ಇಬ್ರಾಹಿಂ ತವಕ್ಕಲ್, ಶೇಕ್ ಸನವರ. ಕಾರ್ಕಳ–ಶ್ರೀಕಾಂತ ಕುಚ್ಚೂರು, ರಂಜಿತ್ ಬಜಗೋಳಿ, ಸುರೇಶ್ ದೇವಾಡಿಗ, ಸಂಪತ್ ಭಂಡಾರಿ, ಶಿವಪ್ರಸಾದ್ ಶೆಟ್ಟಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು