ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರ್ವ | ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ

Last Updated 16 ಡಿಸೆಂಬರ್ 2022, 5:39 IST
ಅಕ್ಷರ ಗಾತ್ರ

ಶಿರ್ವ: ಇಲ್ಲಿನ ನಡಿಬೆಟ್ಟು ಕಂಬಳಗದ್ದೆ ಯಲ್ಲಿ ಸೂರ್ಯ- ಚಂದ್ರ ಸಾಂಪ್ರದಾಯಿಕ ಜೋಡುಕರೆ ಕಂಬಳವು ಈಚೆಗೆ ನಡೆಯಿತು.

ಹಗ್ಗ ಕಿರಿಯ ವಿಭಾಗದಲ್ಲಿ 30 ಜತೆ ಕೋಣಗಳು ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ 48 ಜತೆ ಸೇರಿದಂತೆ ಒಟ್ಟು 78 ಜತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು.

ಫಲಿತಾಂಶ: ಹಗ್ಗ ಕಿರಿಯ– ನಿಟ್ಟೆ ಪರಪ್ಪಾಡಿ ವಿಹಾನ್ ಕೋಟ್ಯಾನ್ ಪ್ರಥಮ, ಮಾರ್ಪಳ್ಳಿ ಕಂಬಳಮನೆ ರಾಜೇಶ್ ಶೆಟ್ಟಿ ದ್ವಿತೀಯ.

ಸಬ್ ಜೂನಿಯರ್ ವಿಭಾಗ– ಬೈಂದೂರು ತಗ್ಗರ್ಸೆ ನೀಲಕಂಠ ಹುದಾರ್ ಪ್ರಥಮ ಮತ್ತು ಭಟ್ಕಳ ಎಚ್.ಎನ್.ನಿವಾಸ ಪಿನ್ನು ಪಾಲ್ ದ್ವಿತೀಯ ಬಹುಮಾನ ಪಡೆದಿವೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ರಮೇಶ್ ದೇವಾಡಿಗ, ಮುತ್ತುರಾಜ್, ಶಿರ್ವ ಠಾಣಾಧಿಕಾರಿ ರಾಘವೇಂದ್ರ ಸಿ, ಶಿರ್ವ ಗ್ರಾಮ ಪಂಚಾ ಯಿತಿ ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ, ಪೊಲೀಸ್‌ ಇಲಾಖೆಯ ಶಶಿಧರ್ ಅವರು ವಿಜೇತ ಕೋಣಗಳ ಮಾಲೀಕರಿಗೆ ಮತ್ತು ಕೋಣ ಓಡಿಸಿದವರಿಗೆ ಬಹುಮಾನ ನೀಡಿ ಗೌರವಿಸಿದರು.

ಶಿರ್ವ ನಡಿಬೆಟ್ಟು ಸುರೇಂದ್ರ ಹೆಗ್ದೆ, ಕಿಶೋರ್‌ಚಂದ್ರ ಹೆಗ್ಡೆ, ಚಂದ್ರಶೇಖರ ಹೆಗ್ಡೆ, ಅಟ್ಟಿಂಜೆ ಸುಧೀರ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಕುತ್ಯಾರು ಸಾಯಿನಾಥ ಶೆಟ್ಟಿ, ಶಿಕ್ಷಕ ರಿತೇಶ್ ಕುಮಾರ್ ಶೆಟ್ಟಿ, ವೀರೇಂದ್ರ ಪೂಜಾರಿ ಇದ್ದರು. ಸುರೇಂದ್ರ ಪೂಜಾರಿ ಕೊಪ್ಪಲ ನಿರೂಪಿಸಿದರು.

ಕಂಬಳ ಇಂದು

ಬ್ರಹ್ಮಾವರ: ಬಿಲ್ಲಾಡಿಯ ದೊಡ್ಮನೆ ಉದ್ಭವ ಮಹಾಗಣಪತಿ ಕೇಚರಾಹುತ ಸಾಂಪ್ರದಾಯಿಕ ಕಂಬಳ ಡಿ.16ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆ ತನಕ ನಡೆಯಲಿದೆ. ಉಡುಪಿ ಜಿಲ್ಲೆಯ ನಾನಾ ಭಾಗಗಳಿಂದ 50 ಜೊತೆಗಿಂತಲೂ ಹೆಚ್ಚು ಕೋಣಗಳು ಬರುವ ನಿರೀಕ್ಷೆ ಇದೆ ಎಂದು ಕಂಬಳ ಸಂಘಟಕ ಬಿಲ್ಲಾಡಿ ಪೃಥ್ವಿರಾಜ್ ಶೆಟ್ಟಿ ತಿಳಿಸಿದ್ದಾರೆ.‌‌‌‌‌‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT