ಗುರುವಾರ , ಆಗಸ್ಟ್ 18, 2022
25 °C

ಕನ್ನಯ್ಯಲಾಲ್ ಕೊಲೆ- ಐಸಿಸ್ ಮಾನಸಿಕತೆ: ಯಶ್‌ಪಾಲ್ ಸುವರ್ಣ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಜಸ್ತಾನದ ಉದಯಪುರದಲ್ಲಿ ಕನಯ್ಯ ಲಾಲ್ ಅಮಾನುಷ ಕಗ್ಗೊಲೆ ಮತಾಂಧ ಶಕ್ತಿಗಳ ವಿಕೃತ ಐಸಿಸ್ ಮಾನಸಿಕತೆಗೆ ಸಾಕ್ಷಿ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೂಪುರ್ ಶರ್ಮ ಹೇಳಿಕೆಯನ್ನು ಸಮರ್ಥಿಸಿದ ಏಕೈಕ ಕಾರಣಕ್ಕೆ ಅಮಾನುಷವಾಗಿ ಹತ್ಯೆ ಮಾಡಿ, ಘಟನೆಯ ವೀಡಿಯೋ ಮಾಡಿರುವುದು ಖಂಡನೀಯ. ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಹತ್ಯೆ ಮಾಡುವ ಬೆದರಿಕೆಯೊಡ್ಡಲಾಗಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟೀಯ ತನಿಖಾದಳದ ಮೂಲಕ ತನಿಖೆ ನಡೆಸಿ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಸಂಘಟಿತ ಹಿಂದೂ ಸಮಾಜದಿಂದ ಮಾತ್ರ ಐಸಿಸ್ ಮಾನಸಿಕತೆಯ ಮತಾಂಧ ಶಕ್ತಿಗಳಿಗೆ ದಿಟ್ಟ ಉತ್ತರ ನೀಡಲು ಸಾಧ್ಯ ಎಂದು ತಿಳಿಸಿದ್ದಾರೆ.

ಇಸ್ಲಾಂ ಭಯೋತ್ಪಾದನೆಯ ಮೂಲಕ ಆಂತರಿಕ ಭದ್ರತೆಗೆ ಸವಾಲೊಡ್ಡಿ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿರುವ ಮತೀಯವಾದಿಗಳ ವಿರುದ್ಧ ಬಹು ಸಂಖ್ಯಾತ ಸಮಾಜ ಜಾಗೃತರಾಗಬೇಕಾದ ಅನಿವಾರ್ಯತೆ ಇದೆ.‌ ಲವ್ ಜಿಹಾದ್, ಹಿಜಾಬ್ ಮುಂತಾದ ವಿವಾದಗಳನ್ನು ಸೃಷ್ಟಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಷಡ್ಯಂತ್ರದ ಮುಂದುವರಿದ ಭಾಗವಾಗಿ ರಾಜಸ್ತಾನದ ಅಮಾನುಷ ಘಟನೆ ನಡೆದಿದೆ ಎಂದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು