ಸೋಮವಾರ, ಡಿಸೆಂಬರ್ 5, 2022
23 °C

ಕಾಂತಾವರ ಕನ್ನಡ ಸಂಘದ ದತ್ತಿ ನಿಧಿ ಪ್ರಶಸ್ತಿ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕಾಂತಾವರ ಕನ್ನಡ ಸಂಘದ 2022ನೇ ಸಾಲಿನ ನಾಲ್ಕು ದತ್ತಿ ನಿಧಿ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ಸರಸ್ವತಿ ಬಲ್ಲಾಳ್ ಹಾಗೂ ಡಾ.ಸಿ.ಕೆ.ಬಲ್ಲಾಳ್ ದಂಪತಿ ಪ್ರತಿಷ್ಠಾನದಿಂದ ಕೊಡಮಾಡುವ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿಗೆ ಕೊಪ್ಪ ತಾಲ್ಲೂಕಿನ ಹರಿಹರಪುರದಲ್ಲಿರುವ ಪ್ರಬೋಧಿನಿ ಟ್ರಸ್ಟ್‌ ಆಯ್ಕೆಯಾಗಿದೆ.

ಪಾ.ವೆಂ.ಆಚಾರ್ಯ ಹೆಸರಿನಲ್ಲಿ ಪಾ.ವೆಂ.ಟ್ರಸ್ಟ್‌ ದತ್ತಿನಿಧಿನಿಂದ ಕೊಡಮಾಡುವ ಪಾ.ವೆಂ.ಮಾಧ್ಯಮ ಪ್ರಶಸ್ತಿಗೆ ಪತ್ರಕರ್ತ ಎನ್‌.ಗುರುರಾಜ್, ಭಾಷಾ ತಜ್ಞ ಡಾ.ಯು.ಪಿ.ಉಪಾಧ್ಯಾಯ ಅವರ ಹೆಸರಿನಲ್ಲಿ ಕೊಡಮಾಡುವ ಮಹೋಪಾಧ್ಯಾಯ ಪ್ರಶಸ್ತಿಗೆ ಸಂಶೋಧಕಿ ಡಾ.ಎನ್‌.ವಾರಿಜಾ, ಸಾಹಿತಿ ಜಿ.ಎಂ.ಹೆಗಡೆ ಧತ್ತಿನಿಧಿಯ ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿಗೆ ಭಾಷಾ ವಿದ್ವಾಂಸರಾದ ಪ್ರೊ.ಆರ್‌.ಶೇಷಶಾಸ್ತ್ರಿ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹10000 ನಗದು, ತಾಮ್ರಪತ್ರವನ್ನು ಒಳಗೊಂಡಿದ್ದು, ನ.1ರಂದು ನಡೆಯುವ ಕಾಂತಾವರ ಉತ್ಸವದಲ್ಲಿ ಪ್ರದಾನ ಮಾಡಲಾಗುವುದು. ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಧತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು