ಕಾಪು (ಪಡುಬಿದ್ರಿ): ಕಾಪು ಶ್ರೀ ಹಳೇ ಮಾರಿಯಮ್ಮ ದೇವಿಯನ ಸನ್ನಿಧಾನದಲ್ಲಿ ಪವಿತ್ರ ಅಧಿಕ ಜ್ಯೇಷ್ಠ ಮಾಸ ಪ್ರಯುಕ್ತ ಮಂಗಳವಾರ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಲಕ್ಷ ಪುಷ್ಪಾರ್ಚನೆ ಸಮರ್ಪಣಾ ಕಾರ್ಯಕ್ರಮ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಕಮಲಾಕ್ಷ ಭಟ್ ಮತ್ತು ಅರ್ಚಕ ಶ್ರೀನಿವಾಸ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದು ವಿಶೇಷ ಲಕ್ಷ ಪುಷ್ಪಾರ್ಚನೆ ನಡೆಯಿತು.

ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ, ಮೊಕ್ತೇಸರರಾದ ರಾಜೇಶ್ ಶೆಣೈ, ರಾಮ್ ನಾಯಕ್, ಸದಾಶಿವ ಕಾಮತ್, ಶ್ರೀಕಾಂತ್ ಭಟ್, ಕಮಿಟಿ ಸದಸ್ಯರಾದ ಚಂದ್ರಕಾಂತ್ ಕಾಮತ್, ಕೃಷ್ಣಾನಂದ ನಾಯಕ್, ಮೋಹನದಾಸ್ ಕಿಣಿ, ರಾಜೇಶ್ ಶೆಣೈ ಮಜೂರು, ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಶೆಣೈ, ಮಾಜಿ ಮೊಕ್ತೇಸರ ರಮೇಶ್ ಪೈ, ಕಾಪು ಪೇಟೆಯ ಹತ್ತು ಸಮಸ್ತರು ಹಾಗೂ ಭಕ್ತರು ಪಾಲ್ಗೊಂಡಿರು.

ಭಕ್ತರಿಂದ ಸಮರ್ಪಣೆಗೊಂಡ ಕೆಂಪು ಕೇಪುಳ ಹೂ ಮತ್ತು ಮಲ್ಲಿಗೆ ಹೂವಿನೊಂದಿಗೆ ಲಕ್ಷ ಪುಷ್ಪಾರ್ಚನೆ ನಡೆಸಿ, ಬಳಿಕ ಒಂದು ಸಾವಿರಕ್ಕೂ ಅಧಿಕ ಚೆಂಡು ಮಲ್ಲಿಗೆಯನ್ನು ಅಲಂಕಾರಕ್ಕೆ ಸಮರ್ಪಿಸಲಾಯಿತು. ವಿಶೇಷ ಲಕ್ಷ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ 2 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. 400ಕ್ಕೂ ಅಧಿಕ ಮಂದಿ ಲಕ್ಷ ಪುಷ್ಪಾರ್ಚನೆ ಸೇವೆ ಸಮರ್ಪಿಸಿದರು.

35 ಕೆ.ಜಿಯಷ್ಟು ಕೆಂಪು ಕೇಪಳ ಹೂ, 1200ಕ್ಕೂ ಅಧಿಕ ಚೆಂಡು ಮಲ್ಲಿಗೆ ಸಮರ್ಪಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-28-608632109

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.