ಕಾಪು (ಪಡುಬಿದ್ರಿ): ಕಾಪು ಪುರಸಭಾ ವ್ಯಾಪ್ತಿಯಲ್ಲಿ ಅನಧಿಕೃತ ರೆಸಾರ್ಟ್, ಹೋಂಸ್ಟೇಗಳು ತಲೆಯೆತ್ತಿದ್ದು, ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಪು ಪುರಸಭಾ ಸದಸ್ಯರು ಮಂಗಳವಾರ ಆಗ್ರಹಿಸಿದರು.

ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷ ಕಿರಣ್ ಆಳ್ವ ಮಾತನಾಡಿ, ನಾಯಿ ಕೊಡೆಗಳಂತೆ ರೆಸಾರ್ಟ್-ಹೋಮ್ ಸ್ಟೇಗಳು ತೆರೆದಿವೆ. ಈ ಬಗ್ಗೆ ಪುರಸಭೆಯು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿದೆಯೇ? ಮೆಸ್ಕಾಂ ವಿದ್ಯುತ್ ಸಂಪರ್ಕ ನೀಡುವಾಗ ಎನ್ಒಸಿ ಪಡೆದಕೊಂಡಿವೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಪುರಸಭೆ ವ್ಯಾಪ್ತಿಯಲ್ಲಿ 29 ರೆಸಾರ್ಟ್ - ಹೋಮ್ ಸ್ಟೇಗಳಿದ್ದು, ಅದರಲ್ಲಿ ನಾಲ್ಕು ಅನಧಿಕೃತ ಹೋಮ್ ಸ್ಟೇಗಳನ್ನು ಗುರುತಿಸಲಾಗಿದೆ. ಉಳಿದವುಗಳನ್ನು ಸರ್ವೆ ಮಾಡಿ ಪತ್ತೆ ಹಚ್ಚಲಾಗುವುದು ಎಂದರು.

ಸದಸ್ಯರಾದ ಫರ್ಜಾನ, ಬಾಬಣ್ಣ ನಾಯಕ್, ಅಮೀರ್ ಅನಧಿಕೃತ ಕಟ್ಟಡ ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಪುರಸಭೆ ವ್ಯಾಪ್ತಿಯಲ್ಲಿ 40 ಕಟ್ಟಡಗಳಲ್ಲಿ 384 ಮನೆಗಳಿವೆ. ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಅಧಿಕಾರಿ ಶಶಿಕಲಾ ಭರವಸೆ ನೀಡಿದರು.

ಪೊಲಿಪು ವಾರ್ಡ್ನಲ್ಲಿ ಇಂಟರ್ ಲಾಕ್ ಅಳವಡಿಕೆ ಕಾಮಗಾರಿ ನಡೆಸದೇ ಇರುವ ಬಗ್ಗೆ ವಾರ್ಡ್ ಸದಸ್ಯೆ ರಾಧಿಕಾ ಸುವರ್ಣ ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಸದಸ್ಯರೆಲ್ಲರೂ ದನಿಗೂಡಿಸಿ ಅದು ಸರ್ಕಾರಿ ಜಾಗವೆಂದು ಗುರುತಿಸಿದ್ದು ಕೂಡಲೇ ಕ್ರಮ ವಹಿಸುವಂತೆ ಒತ್ತಾಯಿಸಿದರು. ಪರಿಶೀಲನೆ ನಡೆಸಿ ಶೀಘ್ರ ಕಾಮಗಾರಿ ನಡೆಸುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೂಚಿಸಿದರು.

ಪಾರ್ಕಿಂಗ್ಗೆ ಜಂಟಿ ಸರ್ವೇ: ಕಾಪು ಪೇಟೆಯ ಟ್ರಾಫಿಕ್ ನಿರ್ವಹಣೆ, ಪಾರ್ಕಿಂಗ್ ಒತ್ತಡ ಕಡಿಮೆ ಮಾಡಲು ಪಿಡಬ್ಲ್ಯುಡಿ ಮತ್ತು ಕಾಪು ಪುರಸಭೆ ವತಿಯಿಂದ ಜಂಟಿ ಸರ್ವೆ ನಡೆಸಲಾಗಿದೆ. ಈ ಬಗ್ಗೆ ಮ್ಯಾಪಿಂಗ್ ನಡೆಸಿ, ಪುರಸಭೆ, ಪಿಡಬ್ಲ್ಯುಡಿ, ಪೊಲೀಸ್, ಆರ್ಟಿಒ ಸೇರಿ ಮುಂದಿನ ಕ್ರಮ ವಹಿಸಲಾಗು ವುದು ಎಂದು ನೀಲಕಂಠ ಮೇಸ್ತ ಹೇಳಿದರು.

ಕಾಪು ಪೇಟೆಯಲ್ಲಿ ಸರ್ಕಾರಿ ಜಾಗದಲ್ಲಿ ಪಾರ್ಕಿಂಗ್ ನಿರಾಕರಿಸುವ ಅಂಗಡಿ ಮಾಲೀಕರು, ಕಟ್ಟಡ ನಿರ್ಮಿಸುವವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಶೈಲೇಶ್ ಅಮೀನ್, ಅನಿಲ್ ಕುಮಾರ್, ಫರ್ಜಾನ, ಶೋಭಾ ಬಂಗೇರ ಪ್ರಶ್ನಿಸಿದರು.

ಸರ್ವರ್ನ ಕೊರತೆಯಿಂದ ಪಡಿತರ ಪಡೆಯಲು ಸಾಧ್ಯವಾಗದೇ ಜನ ಹಿಂತೆರಳುವಂತಾಗಿದೆ. ಇಂತಹ ಸಮಸ್ಯೆ ಆಲಿಸಲು ಆಹಾರ ಇಲಾಖೆಯ ಅಧಿಕಾರಿಗಳು ಸತತವಾಗಿ ಗೈರು ಹಾಜರಾಗುತ್ತಿರುವುದಕ್ಕೆ ಸದಸ್ಯರು ಒಕ್ಕೊರಲಿನಿಂದ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಪತ್ರ ಬರೆಯುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು.

ಮಳೆ ನೀರು ಹರಿಯುವ ಚರಂಡಿಗೆ ಕೊಳಚೆ ನೀರು ಬಿಡುತ್ತಿದ್ದಾರೆ. ಈ ಬಗ್ಗೆ ಕ್ರಮ ವಹಿಸುವಂತೆ ಸದಸ್ಯರು ಒತ್ತಾಯಿಸಿದರು. ಪರಿಶೀಲನೆ ನಡೆಸಿ ಕ್ರಮ ವಹಿಸುವ ಭರವಸೆ ನೀಡಿದರು. ಬೀದಿ ನಾಯಿಗಳ ನಿರ್ವಹಣೆ, ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು ಎಂದರು.

ಕೊಳಚೆ ನೀರು ಬಿಡುವವರಿಗೆ ನೋಟಿಸ್ ಜಾರಿ ಮಾಡಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕ್ರಮ ವಹಿಸ ಲಾಗುವುದು ಎಂದು ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಭರವಸೆ ನೀಡಿದರು.

ಕಾಪು ಸರ್ವಿಸ್ ರಸ್ತೆಯಲ್ಲಿ ಎಕ್ಸ್ಪ್ರೆಸ್ ಬಸ್ ಸಂಚಾರಕ್ಕೆ ಅವಕಾಶ ನೀಡದಂತೆ ನಿರ್ಣಯ ಮಾಡಿ ಕಳುಹಿಸಿಕೊಡಲಾಗಿದ್ದು ಪುರಸಭೆ ನಿರ್ಣಯಗಳಿಗೆ ಜಿಲ್ಲಾಡಳಿತ ಬೆಲೆ ನೀಡುತ್ತಿಲ್ಲ ಎಂದು ಸದಸ್ಯರು ದೂರಿದರು. ಸಾಮಾನ್ಯ ಸಭೆಗೆ ಗೌರವ ನೀಡುವುದು ಎಲ್ಲಾ ಇಲಾಖೆಗಳ ಕರ್ತವ್ಯವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ಮಾತುಕತೆ ನಡೆಸುವುದಾಗಿ ಶಾಸಕ ಸುರೇಶ್ ಶೆಟ್ಟಿ ಭರವಸೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-28-962120026

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.