ಕಾಪು (ಪಡುಬಿದ್ರಿ): ಇಲ್ಲಿನ ಹಳೆ ಮಾರಿಯಮ್ಮ ದೇವಸ್ಥಾನದ ದೇವಿಯ ನವರತ್ನ ಖಚಿತ ಸ್ವರ್ಣ ಸಿಂಹಾಸನ (ಗದ್ದಿಗೆ) ನಿರ್ಮಾಣ ಮಹಾಸಂಕಲ್ಪ ಸ್ವರ್ಣ ಸಮರ್ಪಣಾ ಮಹಾ ಅಭಿಯಾನಕ್ಕೆ ಮಾರ್ಚ್ 24ರಂದು ಚಾಲನೆ ನೀಡಲಾಗುವುದು.

ಇಲ್ಲಿನ ಪೇಟೆಗೌರ ಸಾರಸ್ವತ ಸಮಾಜಕ್ಕೆ ಒಳಪಟ್ಟ ಹಳೆ ಮಾರಿಯಮ್ಮ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾರ್ಯದ ಪ್ರಮುಖ ಅಂಗವಾದ ಸ್ವರ್ಣ ಸಮರ್ಪಣಾ ಮಹಾಅಭಿಯಾನದ ಉದ್ಘಾಟನ ಸಮಾರಂಭ, ಸಭಾ ಕಾರ್ಯಕ್ರಮ ದೇವಿಯ ಕಾಲಾವಧಿ ಸುಗ್ಗಿ ಜಾತ್ರೆಯಂದು ರಾತ್ರಿ 9.30ಕ್ಕೆ ನಡೆಯಲಿದೆ.

ವೆಂಕಟರಮಣ, ಹಳೆ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಕಮಲಾಕ್ಷ ಭಟ್ ಕಾಪು, ವೆಂಕಟರಮಣ ದೇವಸ್ಥಾನದ ಅರ್ಚಕ ಚೇಂಪಿ ಶ್ರೀಕಾಂತ್ ಭಟ್, ಜ್ಯೋತಿಷಿ ಕೊರಂಗ್ರಪಾಡಿ ಕೆ.ಪಿ. ಶ್ರೀನಿವಾಸ ತಂತ್ರಿ ಮಡುಂಬು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಹಳೆ ಮಾರಿಯಮ್ಮ ದೇವಸ್ಥಾನದ ಮಾಜಿ ಆಡಳಿತ ಮೊಕ್ಷೇಸರ ಶ್ರೀಧರ ಆನಂದ್ರಾಯ ಶೆಣೈ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-28-205410133

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.