ಕಾರ್ಕಳ: ತಾಲ್ಲೂಕಿನ ಅರ್ಬಿ ದುರ್ಗಾ ಬ್ರಹ್ಮಶ್ರೀ ಮೊಗೇರ ದೈವಸ್ಥಾನದ ಧರ್ಮ ದೈವಗಳ ಪುನರ್ ಪ್ರತಿಷ್ಠೆ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಮಹಾಸಭೆ ಈಚೆಗೆ ನಡೆಯಿತು.

ನಗರದ ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ಧರ್ಮ ದೈವಗಳ ಪುನರ್ ಪ್ರತಿಷ್ಠೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಸಮಿತಿಯ ವಿಜ್ಞಾಪನಾ ಪತ್ರ ಅನಾವರಣಗೊಳಿಸಿದರು.

ಸಭೆ ಉದ್ಘಾಟಿಸಿದ ಮುಂಬೈಯ ಉದ್ಯಮಿ ಗಿರೀಶ್ ಶೆಟ್ಟಿ ಕುಡುಪುಲಾಜೆ ಹಾಗೂ. ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ಶೆಟ್ಟಿ, ದೈವಸ್ಥಾನದ ಯೋಜನೆಗಳಿಗೆ ಸಹಕಾರ ನೀಡಲಾಗುವುದು ಎಂದರು.

ಅಮ್ಮನ ನೆರವು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿ, ದೈವಸ್ಥಾನದ ಕಾರ್ಯನಿರ್ವಾಹಕ ಮೊಕ್ತೇಸರ ಅರ್ಬಿ ಸುಬ್ರಾಯ ಪಾಠಕ್, ಅರ್ಚಕ ವಿರೂಪಾಕ್ಷ ಮರಾಠೆ ಮಾತನಾಡಿದರು.

ಸಮಿತಿಯ ಗೌರವಾಧ್ಯಕ್ಷ, ಶಾಸಕ ವಿ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಬರ್ಕೆಮನೆ ಮಿಯ್ಯಾರು ಜಗದೀಶ್ ಪೂಜಾರಿ, ದುರ್ಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್ ರಾವ್, ಮಲ್ಲಾರು ಸಿದ್ಧಿವಿನಾಯಕ ದೇವಸ್ಥಾನದ ಗಣಪತಿ ಕಟ್ಟೆಯ ಅಧ್ಯಕ್ಷ ಶಂಕರ್ ನಾಯ್ಕ್, ಕೆಎಂಎಫ್ ನಿರ್ದೇಶಕ ಸುಧಾಕರ ಶೆಟ್ಟಿ ಮುಡಾರು, ಶಂಕರ್ ಭಟ್ ಕೆರ್ವಾಶೆ, ಪ್ರಶಾಂತ್ ಕುಮಾರ್, ಸುಕೀರ್ತಿ ಶೆಟ್ಟಿ ಮಿಯ್ಯಾರು, ರೋಹಿತ್ ಶೆಟ್ಟಿ ಮಿಯ್ಯಾರು, ಕಿಶೋರ್ ಶೆಟ್ಟಿ ಮಿಯ್ಯಾರು, ಪ್ರಶಾಂತ್ ಆಚಾರ್ಯ, ಅಶೋಕ್ ಮಡಿವಾಳ, ರಮೇಶ್ ಶೆಟ್ಟಿ ರೆಂಜಾಳ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಮೇಶ್ ಕಾಡಂಬಳ, ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ರಮೇಶ್ ಅಂಬಡೆಮಾರು ಉಪಸ್ಥಿತರಿದ್ದರು.

ದೈವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಸಂಜೀವ ಎಸ್ ಕೆ ಸ್ವಾಗತಿಸಿದರು. ಸಮಿತಿಯ ಅಧ್ಯಕ್ಷ ಉಮೇಶ್ ಜೆ ಮಿಯ್ಯಾರು ವಂದಿಸಿದರು. ಶಿಕ್ಷಕ ದೇವದಾಸ್ ಕೆರೆಮನೆ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-28-520079096

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.