ಕಾರ್ಕಳ: ‘ಕಾವ್ಯಾಭಿಷೇಕದಲ್ಲಿ ಬಾಹುಬಲಿ ಸಾರಿದ ತತ್ವಗಳ ಅನುಭೂತಿಯಾದಂತಾಯಿತು’ ಎಂದು ಸಾಹಿತಿ ಜ್ಯೋತಿ ಗುರುಪ್ರಸಾದ್ ಹೇಳಿದರು.

ಇಲ್ಲಿನ ಗೊಮ್ಮಟಬೆಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ, ಜೈನಧರ್ಮ ಜೀರ್ಣೋದ್ಧಾರ ಸಂಘದ ಸಹಯೋಗದಲ್ಲಿ ಫಾಲ್ಗುಣಿ ಹುಣ್ಣಿಮೆ ಚೆಲುವಿನಲ್ಲಿ ಆಯೋಜಿಸಿದ್ದ ‘ಗೊಮ್ಮಟೇಶನಿಗೆ ಕಾವ್ಯಾಭೀಷೇಕ’ ಕವಿಗೋಷ್ಠಿಯಲ್ಲಿ ಸಮನ್ವಯಕಾರರಾಗಿ ಅವರು ಮಾತಾನಾಡಿದರು.

ತ್ಯಾಗಮೂರ್ತಿ ಬಾಹುಬಲಿಗೆ ಕಾವ್ಯಾಭಿಷೇಕ ಕವಿಗೋಷ್ಠಿಯ ಪರಿಕಲ್ಪನೆ ವಿನೂತನವಾದುದು. ಬಾಹುಬಲಿಯ ಪ್ರತಿಮೆ ಸದಾ ಚೈತನ್ಯದಾಯಕ. ಬಾಹುಬಲಿಯ ವಿನೀತ ಭಾವ ಕವಿತೆಯಲ್ಲಿ ಆವಿರ್ಭವಿಸಿ ಸಹೃದಯರಿಗೆ ರಸಾನುಭೂತಿಯಾಯಿತು. ಬಾಹುಬಲಿಯ ಪರಿಶುದ್ಧ ವ್ಯಕ್ತಿತ್ವದ ಆರಾಧನೆಯೇ ಕಾವ್ಯಾಭಿಷೇಕದಲ್ಲಿ ಕವಿಗಳ ಸಂಕಲ್ಪವಾಗಿದೆ. ಬಾಹುಬಲಿಯ ಆದರ್ಶಗಳು ಗುಣಗಾನ, ತಾತ್ವಿಕತೆಯನ್ನು ತಿಳಿಸಿದೆ. ಸರ್ವ ಜನಾಂಗದ ಶಾಂತಿಯ ತೋಟದ ನಾಡಿನಲ್ಲಿ ಕಾರ್ಕಳ ಜೈನರುದ್ಯಾನದ ಚೆಲುವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂಬರುವ ಕಾರ್ಕಳ ಮಸ್ತಕಾಭಿಷೇಕದ ಸಂಭ್ರಮ ಕನ್ನಡ ನಾಡಿಗೆ ಪಸರಿಸಲಿದೆ. ಈ ಸಂಭ್ರಮಕ್ಕೆ ಪೂರಕವಾಗಿ ಕಾವ್ಯಾಭಿಷೇಕ ಪರಿಕಲ್ಪನೆಯಲ್ಲಿ ಈ ಕವಿಗೋಷ್ಠಿ ಎಂದು ಹೇಳಿದರು.

ಉದ್ಘಾಟಿಸಿದ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಮಾತನಾಡಿ, ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಸಹಕಾರಿ. ಬಾಹುಬಲಿಯು ತ್ಯಾಗವನ್ನು ಸಾರಿದ, ಭೋಗವನ್ನು ತ್ಯಜಿಸಿದ ಸಮನ್ವಯದ ಸಾಮರಸ್ಯ ಬೆಳಗಿಸಿದ ಜೀವನವೇ ನಮಗೆ ಸಂದೇಶ ಎಂದರು.

ಆಶಯ ನುಡಿಗಳನ್ನಾಡಿದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಾವು ರಚಿಸಿದ ಕವನ ವಾಚಿಸಿದರು. ಜೈನ ಧರ್ಮ ಜೀರ್ಣೋದ್ಧಾರ ಸಂಘದ ಗೌರವ ಕಾರ್ಯದರ್ಶಿ ಮೋಹನ್ ಪಡಿವಾಳ್, ರಂಗ ಸಂಸ್ಕೃತಿ ಅಧ್ಯಕ್ಷ ನಿತ್ಯಾನಂದ ಪೈ, ಸಾಹಿತಿ ಸಿದ್ಧಾಪುರ ವಾಸುದೇವ ಭಟ್ಟ, ಬೆಟ್ಟದ ಅರ್ಚಕ ನಾಗರಾಜ ಇಂದ್ರ ಶುಭ ಹಾರೈಸಿದರು. ಘಟಕದ ಕೋಶಾಧಿಕಾರಿ ಅರುಣ್ ರಾವ್ ಭಾಗವಹಿಸಿದ್ದರು.

ಕವಿಗೋಷ್ಠಿಯಲ್ಲಿ ಸಿದ್ಧಾಪುರ ವಾಸುದೇವ ಭಟ್ಟ, ಗಂಗಾಧರ ಫಣಿಯೂರು, ರಮೇಶ್ ಪ್ರಭು , ಬಿ.ವಿ.ರಾವ್, ಮಾಲತಿ ವಸಂತ ರಾಜ್, ಅನುಪಮಾ ಚಿಂಪ್ಣೂಕರ್, ಸುಲೋಚನಾ ಬಿ.ವಿ, ಶೈಲಜಾ ಹೆಗ್ಡೆ, ಡಾ.ಸುಮತಿ, ಪ್ರಜ್ವಲಾ ಶೆಣೈ, ಹರಿಪ್ರಸಾದ್ ನಂದಳಿಕೆ, ಅವನಿ ಉಪಾಧ್ಯ, ಕಾರ್ಯದರ್ಶಿ ದೇವದಾಸ ಕೆರೆಮನೆ, ಗಣೇಶ್ ಜಾಲ್ಸೂರು ಕವನ ವಾಚಿಸಿದರು. ಭೋಜರಾಜ ಕಡಂಬ, ನಾಗರಾಜ ಇಂದ್ರ ಜಿನ ಸ್ತುತಿ ಮಾಡಿದರು. ಪ್ರಾಂಜಲಿ ಜಿನ ಸ್ತುತಿ ಗಾಯನ ಮಾಡಿದರು. ಶಶಿಕಲಾ ಹೆಗ್ಡೆ ಪ್ರಾರ್ಥಿಸಿದರು. ಗಣೇಶ್ ಜಾಲ್ಸೂರು ನಿರೂಪಿಸಿದರು. ಗೌರವ ಕಾರ್ಯದರ್ಶಿ ಸುಧಾಕರ ಪೊಸ್ರಾಲು ವಂದಿಸಿದರು. ಶಿವಸುಬ್ರಹ್ಮಣ್ಯ ಭಟ್, ಜಿಲ್ಲಾ ಪ್ರತಿನಿಧಿ ನರಸಿಂಹ ಮೂರ್ತಿ, ತಿಪ್ಪೇಸ್ವಾಮಿ, ಸಮರ್ಥ್ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.