ಕಾರ್ಕಳ: ಜಾತಿ ವ್ಯವಸ್ಥೆ ಎಂಬ ಹೆಮ್ಮರವನ್ನು ಬುಡಸಮೇತ ಕಿತ್ತೆಸೆಯುವವರೆಗೂ ಇಲ್ಲಿ ನಿಜವಾದ ಸಮಾನತೆ ಮರೀಚಿಕೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.

ಇಲ್ಲಿನ ಬಂಡಿಮಠ ಬಸ್ ನಿಲ್ದಾಣದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ‘ಜೈ ಭೀಮ್ ಯುವ ಸೇನಾ’ ವತಿಯಿಂದ ಆಯೋಜಿಸಿದ್ದ ಪುರಸ್ಕಾರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮಾತನಾಡಿ ಸಮಾನತೆ ಕೊಡುವುದಲ್ಲ, ಪಡೆದುಕೊಳ್ಳುವುದು ಮುಖ್ಯ ಎಂದರು.

ಮನೆಗೆ ಬಂದಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಪಳ್ಳಿಯ ಬಾಲಕಿ ಶ್ರಾವ್ಯಾ, ಭೂಸೇನೆಯ ನಿವೃತ್ತ ಯೋಕ ಆನಂದ್ ಕಬ್ಬಿನಾಲೆ, ಕ್ರೀಡಾ ಸಾಧಕಿ ಸಾರ್ವಿಕ ಧನ್ಯಾ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಬ್ಯಾಗ್, ಪುಸ್ತಕ ವಿತರಿಸಲಾಯಿತು. 10ನೇ ತರಗತಿ ಮತ್ತು ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಅಧಿಕ ಅಂಕ ಗಳಿಸಿದವರನ್ನು ಗೌರವಿಸಲಾಯಿತು.

ತಹಶಿಲ್ದಾರ್ ಪ್ರದೀಪ್ ಕುಮಾರ್, ತೆಂಗುರಾಜ ಪ್ರೊಡಕ್ಷನ್ನ ಜಾನ್ ಆರ್ ಡಿಸೋಜ, ಕರ್ನಾಟಕ ಜೈ ಭೀಮ್ ಯುವ ಸೇನೆ ಪ್ರಧಾನ ಕಾರ್ಯದರ್ಶಿ ಸತೀಶ್ ಆರ್. ಮೂಡಬಿದ್ರೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ಎ.ಎಲ್ ಗ್ರೂಪ್ ಮಾಲೀಕ ಸಮದ್ ಖಾನ್, ಕುಕ್ಕುಂದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಉಷಾ, ಸ್ವಾಮಿ ಕೃಪಾ ಕನ್ಸಕ್ಷನ್ ಮಾಲೀಕ ತಿಮ್ಮಪ್ಪ, ಪುರಸಭೆ ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಶಕ ಕುಮಾರ್ ನಾಯ್ಕ, ಮಹಿಳಾ ಅಧ್ಯಕ್ಷೆ ಶಾಂತಿ ಹಾಗೂ ಪದಾಧಿಕಾರಿಗಳಾದ ಸುನಿಲ್, ರಮೇಶ್, ಸುನಿಲ್ ನಿಂಜೂರು, ಕೃಷ್ಣ ಕೆ. ಅಜೆಕಾರ್, ರಮೇಶ್ ಕಾರ್ಕಳ, ಶೋಭಾ, ಸತೀಶ್ ಕೆರ್ವಾಶೆ, ಪದ್ಮಾವತಿ, ಗಣೇಶ್ ಹಿರಿಯಡ್ಕ ಶಾಲಿನಿ ಅಂಡಾರ್, ವಸಂತ ಟಿ ಪಾಲ್ಗೊಂಡಿದ್ದರು. ಕರ್ನಾಟಕ ಜೈ ಭೀಮ್ ಯುವ ಸೇನೆಯ ರಾಜ್ಯಾಧ್ಯಕ್ಷ ಎಸ್. ಪಿ. ಅಶೋಕ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷೆ ವಾಣಿ ಸ್ವಾಗತಿಸಿದರು. ಸವಿತಾ ವರದಿ ವಾಚಿಸಿದರು. ನಳಿನಿ ಸುವರ್ಣ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-28-1017108689

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.