ಕಾರ್ಕಳ: ತಾಲ್ಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಎಂಬಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ನಡೆದಿದ್ದ ಜಯಶ್ರೀ ಪೂಜಾರಿ ಎಂಬುವರ ಮನೆಯ ಕೊಟ್ಟಿಗೆಗೆ ನುಗ್ಗಿ ಜಾನುವಾರು ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಮೂಲಕ ಹೊರಬಂದಿರುವ ಆರೋಪಿಗಳ ಜಾಮೀನು ರದ್ದುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಳ್ಳತನ ಮಾಡುತ್ತಿದ್ದಾಗ ಎಚ್ಚರಗೊಂಡ ಮನೆಯೊಡತಿಗೆ ಆರೋಪಿಗಳು ತಲವಾರು ತೋರಿಸಿ ಬೆದರಿಸಿ ಕೊಟ್ಟಿಗೆಯಲ್ಲಿದ್ದ 3 ಜಾನುವಾರುಗಳ ಹಗ್ಗ ತುಂಡರಿಸಿ ವಾಹನದಲ್ಲಿ ಅವುಗಳನ್ನು ತುಂಬಿಸಿ ಕೊಂಡೊಯ್ದು ವಧೆ ಮಾಡಿದ್ದರು. ಅವುಗಳ ಮೌಲ್ಯ ₹35 ಸಾವಿರವಾಗಿದ್ದು, ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಕಾರ್ಕಳ ಸಿಪಿಐ ಅವರು ಆರೋಪಿಗಳಾದ ನಲ್ಲೂರು ಗ್ರಾಮ ದಡ್ಡುಕಜೆಯ ಮೊಹಮ್ಮದ್ ಯೂನಿಸ್, ಪುತ್ತಿಗೆ ಗ್ರಾಮದ ಮಿಜಾರು ಮೊಹಮ್ಮದ್ ಇಕ್ಬಾಲ್ ಯಾನೆ ಇಕ್ಕು, ಮೂಡುಬಿದಿರೆ ಕಲ್ಲಬೆಟ್ಟು ಗ್ರಾಮದ ನಾಸಿರ್ ಯಾನೆ ಮೊಹಮ್ಮದ್ ನಾಸಿರ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋಪಿಗಳಿಗೆ ಜಾಮೀನು ರಹಿತ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳು ಸಂಘಟಿತರಾಗಿ ಕೃತ್ಯ ನಡೆಸಿರುವುದು ತಿಳಿದುಬಂದಿದ್ದು, ನಾಲ್ಕನೇ ಆರೋಪಿ ಶೌಕತ್ ಆಲಿ ವಿರುದ್ಧವೂ ಕೋಕಾ ಕಾಯ್ದೆ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-28-1082874767

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.