ಕಾರ್ಕಳ: ತಾಲ್ಲೂಕಿನ ಬಜಗೋಳಿಯ ಗಣಪತಿ ಸಭಾಭವನದಲ್ಲಿ ವಲಯ ಮಟ್ಟದ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭ ಈಚೆಗೆ ನಡೆಯಿತು.

ಶಿಬಿರದಲ್ಲಿ 142 ಮಂದಿ ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ಮುಖಂಡ ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಭಜನಾ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತವೆ. ಧಾರ್ಮಿಕ ನಂಬಿಕೆಯ, ಒಳ್ಳೆಯ ಮನಸ್ಸು ಸಮಾಜದ ಪ್ರಗತಿಗೆ ದಾರಿದೀಪವಾಗಿದೆ ಎಂದರು.

ಮುಖ್ಯ ಅತಿಥಿ ರೂಪಾ ಆರ್. ಶೆಟ್ಟಿ, ಜನಜಾಗೃತಿ ಜಿಲ್ಲಾ ಸದಸ್ಯ ಹರಿಶ್ಚಂದ್ರ ತೆಂಡೂಲ್ಕರ್ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾರ್ಕಳ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಮಾತನಾಡಿ, ಕ್ಷೇತ್ರದ ಧರ್ಮಾಧಿಕಾರಿಗೆ ಭಜನೆ ಕುರಿತು ಅಪಾರ ಒಲವಿದೆ ಎಂದರು.

ಜನಜಾಗೃತಿ ವಲಯದ ಅಧ್ಯಕ್ಷ ನಾರಾಯಣ ಪೂಜಾರಿ, ನೂತನಾ ಉಪಸ್ಥಿತರಿದ್ದರು. ಉದ್ಯಮಿ ಸದಾನಂದ ಸಾಲ್ಯಾನ್, ಚೌಕಿ ಒಕ್ಕೂಟದ ಅಧ್ಯಕ್ಷೆ ವೇದಾ, ಮಲ್ಲಾರ್, ಮುಡಾರು ಒಕ್ಕೂಟದ ಅಧ್ಯಕ್ಷ ದಿನೇಶ್ ಸೊನಲೆ, ಸದಾನಂದ ಕೋಟ್ಯಾನ್, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕ ಶಿವರಾಂ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುಮಿತ್ರಾ ವಂದಿಸಿದರು. ಭಜನಾ ಪರಿಷತ್ತಿನ ಜಿಲ್ಲಾ ಸಮಾನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-28-378844941

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.