ಕಾರ್ಕಳ: ಹವಾಮಾನ ಬಿಕ್ಕಟ್ಟು ವಿಶ್ವದ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಸುಸ್ಥಿರತೆ ಮತ್ತು ಸಮತೆ ಕಾರ್ಯಕರ್ತ ಶ್ರೀಕುಮಾರ್ ತಿಳಿಸಿದರು.

ಇಲ್ಲಿನ ಅನಂತಶಯನದ ಸಂಭ್ರಮ ಸಭಾಂಗಣದಲ್ಲಿ ಕಾರ್ಕಳ ಹಿರಿಯ ನಾಗರಿಕರ ಸಂಘ, ಸಹಬಾಳ್ವೆ ಕಾರ್ಕಳ ಸಂಘದ ಆಶ್ರಯದಲ್ಲಿ ‘ಹವಾಮಾನ ಬಿಕ್ಕಟ್ಟು ತಾಂತ್ರಿಕ ಪರಿಹಾರ ಸಾಧ್ಯವೇ’ ಎಂಬ ಕುರಿತು ನಡೆದ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಆರ್ಥಿಕ ಅಸಮಾನತೆ, ಐಷಾರಾಮಿ ಜೀವನ, ಆಧುನಿಕ ತಂತ್ರಜ್ಞಾನಗಳು ಇದಕ್ಕೆ ಮೂಲ ಕಾರಣ. ಭೂಮಿಯಲ್ಲಿರುವ ಖನಿಜ, ಅನಿಲ, ತೈಲ ಮಿತ ಪ್ರಮಾಣದಲ್ಲಿ ಇರುವ ಕಾರಣ ಸೌರಶಕ್ತಿ ಬಳಕೆ ಮಾಡಬೇಕಾಗಿದ್ದು, ಪ್ರಕೃತಿಯನ್ನು ಮುಂದಿನ ಪೀಳಿಗೆಗೂ ಉಳಿಸುವ ಪ್ರಯತ್ನ ಆಗಬೇಕಾಗಿದೆ ಎಂದರು.

ಕಾರ್ಕಳ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಂ. ಕಮಲಾಕ್ಷ ಕಾಮತ್ ಸ್ವಾಗತಿಸಿದರು. ಕಾರ್ಯದರ್ಶಿ ಜಗದೀಶ ಗೋಖಲೆ ಪರಿಚಯಿಸಿದರು. ಕವಯಿತ್ರಿ ಜ್ಯೋತಿ ಗುರುಪ್ರಸಾದ್ ಪ್ರಾರ್ಥಿಸಿದರು. ಜೋಕಿಂ ಮೈಕೇಲ್ ಪಿಂಟೊ ವಂದಿಸಿದರು. ಶೈಲಜಾ ಹೆಗ್ಡೆ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-28-2057626788

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.