ಕಾರ್ಕಳ: ಇಲ್ಲಿನ ಬಿಲ್ಲವ ಸಭಾಭವನದಲ್ಲಿ ಏ. 24ರಿಂದ 26ರವರೆಗೆ ಹಲಸು ಮೇಳ ಆಯೋಜಿಸಲಾಗಿದೆ ಎಂದು ವಂಶಿ ಇವೆಂಟ್ಸ್ನ ರಮಿತಾ ಸೂರ್ಯವಂಶಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳವು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದ್ದು, ವಿವಿಧ ಆಕರ್ಷಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ರೋಟರಿ ಕ್ಲಬ್ನ ಅಧ್ಯಕ್ಷ ನವೀನ್ ಶೆಟ್ಟಿ ಅವರು, ಹಲಸಿನ ಹಣ್ಣಿನಲ್ಲಿರುವ ಪೌಷ್ಟಿಕಾಂಶ ಹಾಗೂ ಔಷಧೀಯ ಗುಣಗಳ ಕುರಿತು ವಿವರಿಸಿ, ಗ್ರಾಮೀಣ ಸೊಗಡನ್ನು ಇಂದಿನ ಯುವಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ ಎಂದರು.

ಗಣೇಶ್ ಶೆಟ್ಟಿ ಮಾತನಾಡಿ, ‘ಹಲಸಿಗೆ ಮೌಲ್ಯವರ್ಧನೆ ನೀಡುವುದು ಮೇಳದ ಮುಖ್ಯ ಉದ್ದೇಶವಾಗಿದ್ದು, ರೈತರು ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ’ ಎಂದರು.

ಉದ್ಯಮಿ ವಾಸುದೇವ ಭಟ್ ಮಾತನಾಡಿ, ‘ಮೇಳದಲ್ಲಿ ಇಳಕಲ್ ಖಾದಿ ಸೀರೆಗಳು, ಗೃಹಬಳಕೆ ವಸ್ತುಗಳು, ಬಿದಿರು ಉತ್ಪನ್ನಗಳು, ದೀಪಾಲಂಕೃತ ಮಣ್ಣಿನ ಮಡಿಕೆಗಳು ಸೇರಿದಂತೆ 70ಕ್ಕೂ ಹೆಚ್ಚು ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಜೊತೆಗೆ ಭಜನಾ ಸಪ್ತಸ್ವರ, ಸಂಗೀತ ಸ್ಪರ್ಧೆಗಳು ಹಾಗೂ ಹಲಸಿನ ವಿವಿಧ ಖಾದ್ಯಗಳ ಪ್ರದರ್ಶನವೂ ನಡೆಯಲಿದೆ’ ಎಂದು ತಿಳಿಸಿದರು.

ವಂಶಿ ಇವೆಂಟ್ಸ್, ಬೆನಕ ಇವೆಂಟ್ಸ್ನ ಪ್ರತಿನಿಧಿಗಳು, ಯುವವಾಹಿನಿಯ ಅಧ್ಯಕ್ಷ ಪ್ರಕಾಶ್ ಪೂಜಾರಿ ಕೆರುವಾಶೆ, ಭಾಸ್ಕರ ಪೂಜಾರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-28-161730150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.