ಕಾರ್ಕಳ: ಇಲ್ಲಿನ ಪರಿಸರದ ಅವಿಸ್ಮರಣೀಯ ಸ್ಥಳ, ಮಣ್ಣಿನ ಸಾರವನ್ನು ಅರ್ಥೈಸುವ, ಸಂಸ್ಕೃತಿಯ ಪ್ರತೀಕವನ್ನು ಬಿಂಬಿಸುವ ‘ನಮನ’ ಚಿತ್ರಕಲಾ ಪ್ರದರ್ಶನ ಇದೇ 10ರಂದು ಬೈಲೂರು ಹಾಲಿನ ಡೇರಿ ಮೇಲ್ಗಡೆಯ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ.

ಆಯ್ದ 30 ವಿದ್ಯಾರ್ಥಿಗಳ ಚಿತ್ರಕಲಾಕೃತಿಗಳ ಪ್ರದರ್ಶನ ಇರಲಿದೆ. ಸಂಜೆ 4.30ಕ್ಕೆ ಶಾಸಕ ವಿ. ಸುನಿಲ್ ಕುಮಾರ್ ಉದ್ಘಾಟಿಸುವರು. ಯಕ್ಷಗಾನ ಮೇಳಗಳ ಸಂಚಾಲಕ ಪಿ. ಕಿಶನ್ ಹೆಗ್ಡೆ, ನೀರೆ ಬೈಲೂರು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಕುಮಾರ್ ಗುತ್ತುಮನೆ, ಕಣಜಾರು ಲೂರ್ಡ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾಂಶುಪಾಲ ಜಾಸ್ಮಿನ್ ಪಿಂಟೊ, ಉದ್ಯಮಿ ರಮೇಶ್ ಕಿಣಿ, ಉದಯ ಕುಮಾರ್ ಹೆಗ್ಡೆ ಯರ್ಲಪಾಡಿ, ತಾಲ್ಲೂಕು ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶಾಕಿರ್ ಹುಸೇನ್ ಭಾಗವಹಿಸುವರು.

ತ್ರಿವರ್ಣ ಕಲಾ ತರಗತಿಯ ಕಿರಿಯರ ವಿಭಾಗದ ಆಯ್ದ ಕಲಾ ವಿದ್ಯಾರ್ಥಿಗಳಾದ ಅದ್ವಿತ್ ಕುಮಾರ್ ಆರ್, ಆದ್ಯಾ ಸುರೇಶ್, ಅಶುತೋಷ್ ಎಂ. ನಾಯಕ್, ಎ. ನಿಯತಿ ಪೈ, ಆರಾಧ್ಯ ಎಸ್, ಆರಾಂಶ್ ಎಸ್. ಪೂಜಾರಿ, ಆತ್ರಾಡಿ ಕಾವ್ಯರಾಜ್ ಹೆಗ್ಡೆ, ದೇವಾಂಗಣ ಎನ್.ಆರ್, ದೇವಿಕಾ ಉಡುಪ, ಗ್ರೀಷ್ಮಾ ಎಸ್, ಜೋರ್ಡನ್ ಕೋರ್ಡ, ಕೃತಿ ಕೆ. ದೇವಾಡಿಗ, ಪ್ರಣತಿ ಬಿ. ಶೆಟ್ಟಿ, ಪ್ರತ್ವಿಜ್ ಪಿ. ಶೆಟ್ಟಿ, ಪೃತ್ಯೂಷ ಎಸ್.ಯು. ಕಿಣಿ, ರಿಷು ಜೆ. ಶೆಟ್ಟಿ, ಸಾಕ್ಷಿ ಎನ್. ಸಾಲ್ಯಾನ್, ಸಾಕ್ಷಿತ್ ಎಸ್. ಶೆಟ್ಟಿ, ಸಾನ್ವಿ ಎಲ್. ಪೂಜಾರಿ, ಸಾನ್ವಿ ಪಾಲನ್, ಸಧ್ವಿನ್ ಡಿ. ಶೆಟ್ಟಿ, ಸಂಜನಾ ಎಸ್. ಸಮಂತ್, ಸಾತ್ವಿಕ್ ಕೆ. ಆರ್, ಶ್ರೇಯಾನ್ ಪೂಜಾರಿ, ಸ್ಮೃತಿ ತುಂಗಾ ಪಿ, ಸ್ಪರ್ಶ್ ಸುಕೇಶ್ ಪೂಜಾರಿ, ಶ್ರೀಲತಾ ಶೆಣೈ, ತನುಶ್ರೀ, ತೇಜಸ್ ದೇವಾಡಿಗ, ವಿಜೇತಾ ಕೆ.ಎಸ್. ಅವರು ತಮ್ಮ ನೆಲದ, ಸಂಸ್ಕೃತಿಯ ಅಭಿಮಾನವನ್ನು ಕೃತಿಯ ಮೂಲಕ ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ಅಭಿವ್ಯಕ್ತಪಡಿಸುವರು.

ಪಂಚ ಗಂಗಾವಳಿ, ಥೀಂ ಪಾರ್ಕ್, ಮೀನುಗಾರರು, ಕೋಟಿಲಿಂಗೇಶ್ವರ, ಅನಂತ ಶಯನ, ಸಿದ್ಧಿವಿನಾಯಕ, ಗೋ ಶಾಲೆ, ತೆಯ್ಯಂ, ಬೇಸಾಯ, ಟೀ ಎಸ್ಟೇಟ್, ಪ್ರೇಯರ್, ಕಾಂತಾರ, ಸಮುದ್ರ ಸ್ನಾನ, ಪಾಡ್ದನ, ಹುಲಿವೇಷ, ಬ್ರಹ್ಮಲಿಂಗೇಶ್ವರ, ಕಂಬಳ, ಬಸದಿ, ಕಟ್ಟೆಪೂಜೆ, ಬಲಿ, ಕೋಟೆ ಆಂಜನೇಯ, ಜಾತ್ರೆ, ವಿನಾಯಕ, ಸುರಾಪಾನ, ಗೊಂಬೆಯಾಟ, ಬಾಹುಬಲಿ, ಕೋಳಿ ಅಂಕ, ನಂದಾದೀಪ, ಭಕ್ತಿ, ಆನೆಕೆರೆ, ರಥಬೀದಿ, ಜೈನ ಟೆಂಪಲ್, ಡೊಳ್ಳು ಕುಣಿತ ಮುಂತಾದವುಗಳ ಕಲಾಕೃತಿ ಪ್ರದರ್ಶನಗೊಳ್ಳಲಿವೆ.

ಇದೇ 11 ಮತ್ತು 12ರಂದು ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಹರೀಶ್ ಸಾಗಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-28-1188849536

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.