ಕಾರ್ಕಳ–ಪಡುಬಿದ್ರೆ ರಾಜ್ಯ ಹೆದ್ದಾರಿ ಬಂದ್‌ 20ರಂದು

7

ಕಾರ್ಕಳ–ಪಡುಬಿದ್ರೆ ರಾಜ್ಯ ಹೆದ್ದಾರಿ ಬಂದ್‌ 20ರಂದು

Published:
Updated:
Deccan Herald

ಉಡುಪಿ: ಕಾರ್ಕಳ–ಪಡುಬಿದ್ರಿ ರಾಜ್ಯ ಹೆದ್ದಾರಿ ಆಳವಡಿಸಲು ಉದ್ದೇಶಿಸಿರುವ ಟೋಲ್‌ ಗೇಟ್‌ ವಿರುದ್ಧ ಬೆಳ್ಮಣ್ಣು ಟೋಲ್‌ ಗೇಟ್‌ ಹೋರಾಟ ಸಮಿತಿ ಡಿ.20 ರಾಜ್ಯ ಹೆದ್ದಾರಿ ಬಂದ್‌ಗೆ ಕರೆ ನೀಡಿದೆ ಎಂದು ಸಮಿತಿಯ ಅಧ್ಯಕ್ಷ ಎನ್‌.ಸುಹಾಸ್‌ ಹೆಗ್ಡೆ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ ಹಾಗೂ ಪಡುಬಿದ್ರಿ ರಾಜ್ಯ ಹೆದ್ದಾರಿ ಬಂದ್‌ಗೆ ಸ್ಥಳೀಯ ಉದ್ಯಮಿಗಳು, ವರ್ತಕರು, ಸಂಘ ಸಂಸ್ಥೆಗಳ ಮುಖಂಡರು, ಬಸ್‌ ಮಾಲೀಕರು, ರಿಕ್ಷಾ ಮಾಲೀಕರು, ಟ್ಯಾಕ್ಸಿ ಅಸೋಸಿಯೇನ್‌, ಕ್ರಷರ್‌ ಉದ್ಯಮಿಗಳು, ಕಲ್ಲು ಗಣಗಾರಿಕೆ ಉದ್ಯಮಿಗಳು, ಕೃಷಿಕರು ಬೆಂಬಲ ಸೂಚಿಸಿದ್ದಾರೆ. ಅಂದು ಬೆಳಿಗ್ಗೆ 9ಗಂಟೆಗೆ ಬೆಳ್ಮಣ್ಣು ಬಸ್‌ ನಿಲ್ದಾಣದಲ್ಲಿ ಬೃಹತ್‌ ಪ್ರತಿಭಟನಾ ಸಭೆ ಹಾಗೂ ಮೆರವಣೆಗೆ ನಡೆಯಲಿದೆ. ಪ್ರತಿಭಟನೆಯಲ್ಲಿ 40ಕ್ಕೂ ಹೆಚ್ಚಿನ ಹಳ್ಳಿಯ ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪಡುಬಿದ್ರಿ–ಕಾರ್ಕಳ ರಾಜ್ಯ ಹೆದ್ದಾರಿ 40ಕ್ಕೂ ಹೆಚ್ಚಿನ ಹಳ್ಳಿಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ನಿತ್ಯ ಸಾವಿರಾರು ಜನರು ಕೆಲಸದ ನಿಮಿತ್ತ ಬೇರೆ ಬೇರೆ ಪ್ರದೇಶಗಳಿಗೆ ತೆರಳಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ರಾಜ್ಯ ಸರ್ಕಾರ ಸುಂಕ ವಸೂಲಾತಿ ಕೇಂದ್ರವನ್ನು ನಿರ್ಮಿಸಲು ಹೊರಟಿದ್ದು, ಜನ ಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಲಿದೆ ಎಂದು ಹೇಳಿದರು.

ಬೆಳ್ಮಣ್ಣು ಹೋರಾಟ ಸಮಿತಿಯ ಶಶಿಧರ್‌, ಸರ್ವಜ್ಞ ತಂತ್ರಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !