ಕಾರ್ಕಳ: ತಾಲ್ಲೂಕಿನ ಸಾಣೂರು ಗ್ರಾಮದ ಹೆದ್ದಾರಿ ಬದಿಯಲ್ಲಿ ಕಸ ಎಸೆದಿದ್ದ ಕೊಪ್ಪಳ ಮೂಲದ ಪ್ರವಾಸಿಗ ರಿಗೆ ಸಾಣೂರು ಗ್ರಾಮ ಪಂಚಾಯಿತಿ ಆಡಳಿತವು ₹ 2 ಸಾವಿರ ದಂಡ ವಿಧಿಸಿದ ಘಟನೆ ಶುಕ್ರವಾರ ನಡೆದಿದೆ.

ಎರಡು ವಾಹನಗಳಲ್ಲಿ ಜಿಲ್ಲಾ ಪ್ರವಾಸಕ್ಕೆ ಬಂದಿದ್ದ ಕೊಪ್ಪಳದ ಪ್ರವಾಸಿಗರು ತಾವು ಊಟ ಮಾಡಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ಬದಿಯೇ ಎಸೆದಿದ್ದರು. ಇದನ್ನು ಗಮನಿಸಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಅವರು ದಂಡ ವಸೂಲಿಗೆ ಮುಂದಾಗುತ್ತಿದ್ದಂತೆ ‘ನಮ್ಮ ಕಡೆ ಈ ರೀತಿ ನಿಯಮವಿಲ್ಲ.ರಸ್ತೆ ಬದಿಯಲ್ಲಿ ಕಸ ಎಸೆದಂತೆ ಪಂಚಾಯಿತಿ ಸೂಚನಾ ಫಲಕ ಹಾಕಿದ್ದೀರಾ. ನಾವು ದಂಡ ಕೊಡುವುದಿಲ್ಲ. ನೀವು ಏನು ಬೇಕಾದರೂ ಮಾಡಿ ಎಂದು ದಂಡ ಕಟ್ಟುವುದಿಲ್ಲ’ ಎಂದು ಪಟ್ಟು ಹಿಡಿದಿದ್ದರು. ಈ ವೇಳೆ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ ಪಿಡಿಒ, ಪ್ರವಾಸಿಗರನ್ನು ಕಾರ್ಕಳ ನಗರ ಠಾಣೆಗೆ ಬರುವಂತೆ ಒಪ್ಪಿಸಿದರು.

ಪ್ರವಾಸಿಗರು ಗಲೀಜು ಮಾಡಿದ ಸ್ಥಳದ ಫೋಟೊ ಮತ್ತು ವಿಡಿಯೋ ಚಿತ್ರೀಕರಣ ಮಾಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಠಾಣೆಗೆ ದೂರು ಸಲ್ಲಿಸಿ, ಪ್ರವಾಸಿಗರ ಮೇಲೆ ಎಫ್ಐಆರ್ ದಾಖಲಿಸಲು ಒತ್ತಾಯಿಸಿದರು.

ಘಟನೆಗೆ ಗರಿಷ್ಠ ₹ 500 ದಂಡ ವಿಧಿಸುವ ಅಧಿಕಾರ ಐಪಿಸಿಯಲ್ಲಿದೆ ಎಂದು ತಿಳಿಸಿದ ಎಎಸ್ಐ ಮುರಳಿಧರ ನಾಯಕ್ ಅವರು, ಪಂಚಾಯಿತಿ ಮೂಲಕ ದಂಡ ವಿಧಿಸಲು ಸಲಹೆ ನೀಡಿದರು.

ಬಳಿಕ ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಸಿಇಒ ಅವರೊಡನೆ ಸಮಾಲೋಚನೆ ನಡೆಸಿ ದಂಡ ವಿಧಿಸಲಾಯಿತು.

ಈ ವೇಳೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಏರ್ನಡ್ಕ ವಿಶ್ವನಾಥ್ ಶೆಟ್ಟಿ ಸೇರಿದಂತೆ ಹಲವರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-28-2029011589

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.