ಕಾರ್ಕಳ: ಸ್ವ ಉದ್ಯೋಗಕ್ಕೆ ಹೆಚ್ಚು ಉತ್ತೇಜನ ಸಿಗಬೇಕು. ನಮ್ಮ ಊರಿನ ಹೆಸರನ್ನು ನಮ್ಮ ಉತ್ಪನ್ನದ ಜೊತೆಗೆ ಸೇರಿಸಿ ಊರಿನ ಹೆಸರನ್ನು ಪ್ರಖ್ಯಾತಿ ಗೊಳಿಸಬೇಕು ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.

ಇಲ್ಲಿನ ಪೆರ್ವಾಜೆಯ ಬಿಲ್ಲವ ಸಮಾಜ ಸೇವಾ ಸಂಘ, ರೋಟರಿ ಕ್ಲಬ್, ಯುವವಾಹಿನಿ ಕಾರ್ಕಳ ಘಟಕ, ಎನ್.ಪಿ. ಗ್ರೂಪ್ಸ್, ವಂಶಿ ಇವೆಂಟ್ಸ್ ಮತ್ತು ಬೆನಕ ಇವೆಂಟ್ಸ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಹಲಸಿನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಮಿ ನಿತ್ಯಾನಂದ ಪೈ ಮಾತನಾಡಿ, ಸ್ವ ಉದ್ಯೋಗಕ್ಕೆ ಒತ್ತು ಕೊಟ್ಟಾಗ ಗ್ರಾಮೀಣ ಆಹಾರ ಬೆಳಕಿಗೆ ಬರುತ್ತದೆ ಎಂದರು.

ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವತ್ಥ್ ಮಾತನಾಡಿ, ಆಧುನಿಕ ಆಹಾರವು ಸಾಂಪ್ರದಾಯಿಕ ಆಹಾರವನ್ನು ನಾಶ ಮಾಡಿದೆ. ಹಲಸು ಮೇಳದಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಾಗಿವೆ ಎಂದರು.

ರೋಟರಿ ಸಂಸ್ಥೆಯ ಅಧ್ಯಕ್ಷ ನವೀನ್ ಶೆಟ್ಟಿ, ಎನ್ಪಿ ಗ್ರೂಪ್ ಮಾಲೀಕ ವಾಸುದೇವ್ ಭಟ್, ಯುವವಾಹಿನಿ ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬೆನಕ ಇವೆಂಟ್ಸ್ ಮಾಲೀಕ ಗಣೇಶ್ ಶೆಟ್ಟಿ ಮಾಹಿತಿ ನೀಡಿದರು.

ಸಾಮಾಜಿಕ ಕಾರ್ಯಕರ್ತೆ ವಂಶಿ ಇವೆಂಟ್ಸ್ನ ರಮಿತಾ ಸೂರ್ಯವಂಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಯುವವಾಹಿನಿ ಘಟಕದ ನಿಕಟ ಪೂರ್ವಾಧ್ಯಕ್ಷೆ ಮಮತಾ ಪೂಜಾರಿ ವಂದಿಸಿದರು. ಹಿತಾ ನಿರೂಪಿಸಿದರು. ಪ್ರಾರ್ಥನಾ ಹಾಡಿದರು.

ಹಲಸಿನ ಜಿಲೇಬಿ, ಕೇರಳದ ಅಲೆಪ್ಪಿಯಿಂದ ಬಂದಿರುವ 60ಕ್ಕೂ ಹೆಚ್ಚು ಹಲಸಿನ ತಿಂಡಿಗಳು ವಿಶೇಷ ಆಕರ್ಷಣೆಯಾಗಿದ್ದವು.ಐಸ್ ಕ್ರೀಮ್, ಮುಲ್ಕ, ಗೋಬಿಮಂಚೂರಿ, ಹಲ್ವಾ, ಕಡಬು, ಪೋಡಿ, ಪಾಯಸ, ಹಲಸಿನ ಹಣ್ಣಿನ ಬೀಜದ ಪತ್ರೊಡೆ, ಖಾದಿ ಉತ್ಪನ್ನಗಳು ಗಮನ ಸೆಳೆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-28-646455903

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.