ಕಾರ್ಕಳ: ಸ್ವರ್ಣ ಕಾರ್ಕಳ ಕಲ್ಪನೆಯಡಿ ಪ್ರವಾಸೋದ್ಯಮ, ಸಾಹಿತ್ಯ, ಸಾಂಸ್ಕೃತಿಕ ಹೀಗೆ ಎಲ್ಲ ಆಯಾಮಗಳಲ್ಲಿ ಕ್ಷೇತ್ರದ ಜನರು ಆರ್ಥಿಕವಾಗಿ ಸದೃಢರಾಗಬೇಕು. ಕೊನೆಯ ಮನೆಯೂ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವುದೇ ನಮ್ಮ ಆಶಯ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.

ಶಾಸಕರ ವಿಕಾಸ ಕಚೇರಿಯಲ್ಲಿ ಭಾನುವಾರ ಬೋಳಾಸ್ ಆಗ್ರೊ ಸಂಸ್ಥೆ, ವಿಕಾಸ ಸೇವಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಕಳ ಮತ್ತು ಹೆಬ್ರಿ ಸಂಜೀವಿನಿ ಒಕ್ಕೂಟಗಳ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ಹಾಗೂ ಸಂಜೀವಿನಿ ಬಳಗಕ್ಕೆ ಚಂಡೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಕಾಸ ಸಂಸ್ಥೆಯು 20 ವರ್ಷಗಳಿಂದ ನೂರಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತ ಬಂದಿದೆ. ರಾಜಕೀಯವನ್ನು ವರ್ಷವಿಡೀ ನಡೆಸಬಹುದು. ಆದರೆ, ಅದರೊಂದಿಗೆ ಪರೋಕ್ಷವಾಗಿ ಸಾಮಾಜಿಕ ಚಟುವಟಿಕೆಗಳೂ ನಡೆಯಬೇಕು. ಯಾವುದೇ ಪ್ರಚಾರವಿಲ್ಲದೆ, ತಿಂಗಳಿಗೆ ಒಬ್ಬ ಅಶಕ್ತರಿಗೆ ಮನೆ ನಿರ್ಮಾಣ ಮಾಡಿಕೊಡುವುದು, ಅನಾರೋಗ್ಯ ಪೀಡಿತರಿಗೆ ನೆರವು ನೀಡುವುದು ಸೇರಿದಂತೆ ಹತ್ತು ಹಲವು ಮಾನವೀಯ ಕಾರ್ಯಗಳನ್ನು ಸಂಸ್ಥೆ ಮಾಡುತ್ತ ಬಂದಿದ್ದು, ಅದರ ಮುಂದುವರಿದ ಭಾಗವಾಗಿ ₹5 ಲಕ್ಷ ಮೊತ್ತದ 25 ಉಚಿತ ಹೊಲಿಗೆ ಯಂತ್ರ ಹಾಗೂ ಚೆಂಡೆ ವಿತರಣೆ ಮಾಡಲಾಗಿದೆ. ಉದ್ಯಮದ ಜೊತೆಗೆ ಸಮಾಜಕ್ಕೂ ಅಪಾರ ಕೊಡುಗೆ ನೀಡುತ್ತಿರುವ ಬೋಳಾಸ್ ಆಗ್ರೊ ಸಂಸ್ಥೆಯ ಕಾರ್ಯ ಶ್ಲಾಘನೀಯ. ಬೋಳಾಸ್ ಸಂಸ್ಥೆಯು ಸಮಾಜಕ್ಕೆ ಅಗತ್ಯ ಅನಿಸಿದ್ದನ್ನು ಕೊಡುವ ಕಲ್ಪವೃಕ್ಷದಂತಿದೆ. ನರ್ಸಿಂಗ್ ಕಾಲೇಜಿಗೆ ₹75 ಲಕ್ಷ ಧನಸಹಾಯ ಹಾಗೂ ಬೋಳದಲ್ಲಿ ಸಾರ್ವಜನಿಕ ಸೇವೆಗಾಗಿ ಆಂಬುಲೆನ್ಸ್ ನೀಡುವ ಮೂಲಕ ಸಂಸ್ಥೆಯು ಸಮಾಜಕ್ಕೆ ಕೊಡುಗೆ ನೀಡಿದೆ ಎಂದರು.

ಉದ್ಯಮಿ, ಬೋಳಾಸ್ ಆಗ್ರೊದ ಬೋಳ ದಾಮೋದರ ಕಾಮತ್ ಮಾತನಾಡಿ, ಸಮಾಜ ಸೇವೆಯ ಪರಿಕಲ್ಪನೆಗೆ ಶಾಸಕ ಸುನಿಲ್ ಕುಮಾರ್ ಪ್ರೇರಣೆಯಾಗಿದ್ದಾರೆ. ಇಂತಹ ಜನಪರ ಶಾಸಕರನ್ನು ಪಡೆದಿರುವುದು ಕಾರ್ಕಳದ ಪುಣ್ಯ. ಮಹಿಳೆಯರು ತಾವು ತೊಡಗಿಸಿಕೊಂಡ ಉದ್ಯಮದಲ್ಲಿ ಉಳಿತಾಯ ಮಾಡುವ ರೂಢಿ ಬೆಳೆಸಿಕೊಳ್ಳಬೇಕು. ಆ ಮೂಲಕ ತಮ್ಮ ಜೊತೆಗೆ ಇತರರನ್ನೂ ಆರ್ಥಿಕವಾಗಿ ಸಬಲೀಕರಣಗೊಳಿಸಬೇಕು ಎಂದರು.

ಸಂಜೀವಿನಿ ಒಕ್ಕೂಟದ 25 ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 25 ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಸಂಜೀವಿನಿ ಮಹಿಳಾ ತಂಡಕ್ಕೆ ಚೆಂಡೆ ವಿತರಿಸಲಾಯಿತು.

ಸಂಜೀವಿನಿ ಒಕ್ಕೂಟದ ವ್ಯವಸ್ಥಾಪಕಿ ಉಮಾ, ಮಹಾವೀರ ಹೆಗ್ಡೆ, ಮಾಲಿನಿ ರೈ, ಹಾಗೂ ರವೀಂದ್ರ ಮಡಿವಾಳ ಉಪಸ್ಥಿತರಿದ್ದರು. ಕರುಣಾಕರ ಕೋಟ್ಯಾನ್ ನಿರೂಪಿಸಿದರು. ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಜಾತಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-28-1984498972

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.