ಕಾರ್ಕಳ: ‘ಕ್ಷಯ ರೋಗ ನಿರ್ಮೂಲನೆಯಲ್ಲಿ ಆರೋಗ್ಯ ಸಂಸ್ಥೆಗಳ ಪಾತ್ರ ಮಹತ್ವವಾದುದು. ತೊಡಕಿನ ಗರ್ಭಧಾರಣೆಯಲ್ಲಿ ತಾಯಂದಿರು ಮುಂಜಾಗ್ರತೆ ವಹಿಸಬೇಕಾದುದು ಅವಶ್ಯ’ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ.ಭರತೇಶ್ ಆದಿರಾಜ್ ಹೇಳಿದರು.

ಇಲ್ಲಿನ ರೋಟರಿ ಕ್ಲಬ್ ರಾಕ್ ಸಿಟಿ, ಕುಕ್ಕುಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ‘ಹೌದು, ಭಾರತದ ನೇತೃತ್ವದಲ್ಲಿ ನಾವು ಕ್ಷಯ ರೋಗ ನಿರ್ಮೂಲನೆ ಮಾಡಬಹುದು’ ಘೋಷಾ ವಾಕ್ಯದಡಿ ಕುಕ್ಕುಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ಕ್ಷಯ ರೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ರೋಟರಿ ರಾಕ್ ಸಿಟಿ ಅಧ್ಯಕ್ಷ ಸುರೇಂದ್ರ ನಾಯಕ್ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಘಟಕದೊಂದಿಗೆ ಸಹಕಾರ ನೀಡಲಾಗುವುದು ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಅಧಿಕಾರಿ ವೆರೋನಿಕಾ, ಸುಶೀಲಾ ಕೆ. ಅವರು, ಆರೋಗ್ಯ ಸಂಬಂಧಿ ವಿಷಯಗಳಲ್ಲಿ ಸಮುದಾಯ ಸಹಭಾಗಿತ್ವ ಅಗತ್ಯ. ಎಚ್ಪಿವಿ ಲಸಿಕೆಯ ಕುರಿತು ತಿಳಿದಿರಬೇಕು ಎಂದರು.

ಕುಕ್ಕುಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀವಿದ್ಯಾ ಎಸ್. ಕಿದಿಯೂರು ಮಾತನಾಡಿ, ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ವೇಳೆ ಜ್ವರ, ತೂಕದಲ್ಲಿ ಗಣನೀಯ ಇಳಿಕೆ, ಹಸಿವು ಇಲ್ಲದಿರುವುದು, ಕಫದಲ್ಲಿ ರಕ್ತ ಮುಂತಾದ ಲಕ್ಷಣಗಳು ಕಂಡುಬಂದರೆ ಕಫ ಪರೀಕ್ಷೆ ಮಾಡಿಸಬೇಕು. ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ನಮ್ಮ ಗ್ರಾಮ ಕ್ಷಯ ಮುಕ್ತವಾಗಲು ಸಹಕರಿಸಬೇಕು ಎಂದು ಹೇಳಿದರು.

2030ರೊಳಗೆ ಕ್ಷಯ ಮುಕ್ತ ಭಾರತ ಗುರಿ ಸಾಧಿಸಿ ಕ್ಷಯ ರೋಗ ನಿರ್ಮೂಲನೆ ಮಾಡಲು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಪಂಚಾಯಿತಿ ಸದಸ್ಯೆ ರೀನಾ ಕ್ಯಾಥರಿನ್ ಫರ್ನಾಂಡಿಸ್, ಉದಯ ಕುಮಾರ್ ಶೆಟ್ಟಿ, ಶೋಭಾ ಭಾಸ್ಕರ್, ಹಂಝ, ಮುರುಗೇಶ್ ಭಾಗವಹಿಸಿದ್ದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕುಮುದಾವತಿ ನಿರೂಪಿಸಿದರು. ಸುನೀತಾ ಪೂಜಾರಿ ಪ್ರಾರ್ಥಿಸಿದರು. ಸ್ವರ್ಣಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-28-291016770

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.