ಪಡುಬಿದ್ರಿ: ಕರ್ನಾಟಕ ರಾಜ್ಯ ಮೀನುಗಾರಿಕೆ ಸುಧಾರಣಾ ಯೋಜನೆ (ಎಫ್ಐಪಿ)ಯಡಿ ಸ್ಮಾಲ್ ಪೆಲಾಜಿಕ್ ಪರ್ಸ್ಸೈನ್ ಮೀನುಗಾರಿಕೆ ಯೋಜನೆಯ 8ನೇ ಪಾಲುದಾರರ ಸಭೆ ಎರ್ಮಾಳಿನ ಪೆನಿನ್ಸುಲಾ ಡೆಲ್ ಮಾರ್ ಬೀಚ್ ರೆಸಾರ್ಟ್ನಲ್ಲಿ ಸೋಮವಾರ ನಡೆಯಿತು.

ಅವಂತಿ ಫೀಡ್ಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಲ್ಲೂರಿ ಇಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸುಸ್ಥಿರ ಮೀನುಗಾರಿಕೆ, ಜವಾಬ್ದಾರಿಯುತ ಮೀನುಗಾರಿಕೆ ಪದ್ಧತಿ, ಸಮುದ್ರ ಆಹಾರದ ಪತ್ತೆ ಹಚ್ಚುವಿಕೆ ವ್ಯವಸ್ಥೆ, ಭಾರತದ ಸಮುದ್ರ ಆಹಾರ ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಸಲಾಯಿತು.

2 ವರ್ಷಗಳಿಂದ ಕರ್ನಾಟಕ ರಾಜ್ಯ ಮೀನುಗಾರಿಕೆ ಸುಧಾರಣಾ ಯೋಜನೆಯಡಿ ಅಪಾಯದಲ್ಲಿರುವ, ಅಪರೂಪದ ಹಾಗೂ ಸಂರಕ್ಷಿತ (ಇಟಿಪಿ) ಜಾತಿಗಳ ಸಂರಕ್ಷಣೆ, ಜವಾಬ್ದಾರಿಯುತ ಮೀನುಗಾರಿಕೆ, ಸ್ವಚ್ಛತೆ, ಕಾರ್ಮಿಕರ ಕಲ್ಯಾಣ, ಅನೈತಿಕ ಮೀನುಗಾರಿಕೆ ಪದ್ಧತಿಗಳ ತಡೆ ಕುರಿತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೀನುಗಾರರು, ಮೀನುಗಾರಿಕಾ ದೋಣಿಗಳಿಗೆ ಸಂರಕ್ಷಿತ ಜಾತಿಗಳ ಕುರಿತು ಜಾಗೃತಿ ಫಲಕಗಳನ್ನು ವಿತರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಎಫ್ಐಪಿನ ಮುಖ್ಯಸ್ಥ ಉದಯ ಕುಮಾರ್ ಸಾಲ್ಯಾನ್ ತಿಳಿಸಿದರು.

ಯೋಜನಾ ಸಂಯೋಜಕಿ ನಿಮ್ನುವಲ್ ಪೀವ್ರೋಂಗ್ಗಾಮ್, ಐಸಿಎಆರ್ ಸಿಎಂಎಫ್ಆರ್ಐ ಮಂಗಳೂರು ಕೇಂದ್ರದ ಮುಖ್ಯವಿಜ್ಞಾನಿ ಸುಜಿತಾ ಥಾಮಸ್, ರಾಷ್ಟ್ರೀಯ ಕಾರ್ಯಪಡೆ ಸದಸ್ಯ ಗಣೇಶ್ ನಖವಾ, ದಕ್ಷಿಣ್ ಫೌಂಡೇಷನ್ನ ನವೀನ್ ನಂಬೂದ್ರಿ, ದೇವಿ ಸೀಫುಡ್ಸ್ ಲಿಮಿಟೆಡ್ನ ಸರಬ್ಜಿತ್ ಸಿಂಗ್, ಅವಂತಿ ಫೀಡ್ಸ್ ಲಿಮಿಟೆಡ್ನ ನಂದಕಿಶೋರ್, ಸೀಫುಡ್ ಟಾಸ್ಕ್ ಫೋರ್ಸ್ನ ಎ.ಬಿ.ಜೈನ್ ವಿವಿಧ ವಿಷಯಗಳ ಕುರಿತು ಮಾತನಾಡಿದರು.

ಭಾರತೀಯ ಫಿಶ್ಮಿಲ್ ಮತ್ತು ಮೀನು ಎಣ್ಣೆ ರಫ್ತುದಾರರ ಸಂಘದ ಗೌರವಾಧ್ಯಕ್ಷ ಪ್ರಮೋದ್ ಮಧ್ವರಾಜ್, ಮೀನುಗಾರಿಕಾ ಇಲಾಖೆ ಹೆಚ್ಚುವರಿ ನಿರ್ದೇಶಕ ಮಹೇಶ್ ಕುಮಾರ್ ಯು., ಎಂಪಿಇಡಿಎ ಉಪನಿರ್ದೇಶಕ ಮನೋಜ್ ಕುಮಾರ್ ಟಿ.ಜಿ., ಜನತಾ ಗ್ರೂಪ್ ಅಧ್ಯಕ್ಷ ಆನಂದ್ ಸಿ. ಕುಂದರ್, ಸರ್ಕಾರದ ವಿವಿಧ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು, ಸಮುದ್ರ ಆಹಾರ ಕೈಗಾರಿಕೆ, ರಫ್ತುದಾರರು, ಸುಸ್ಥಿರ ಮೀನುಗಾರಿಕೆಗೆ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು, ಮೀನುಗಾರರ ಪ್ರತಿನಿಧಿಗಳು ಭಾಗವಹಿಸಿದ್ದರು.

ರಮೇಶ್ ಎಂ.ಆರ್. ಸ್ವಾಗತಿಸಿ ಸಭೆಯ ಉದ್ದೇಶಗಳನ್ನು ವಿವರಿಸಿದರು. ಚೇತನ್ ಕುಮಾರ್ ಸುವರ್ಣ ವಂದಿಸಿದರು. ಶಿವರಕುಮಾರ್ ಮಗದ ನಿರೂಪಿಸಿದರು. ಯಶಸ್ವಿ ಫಿಶ್ಮಿಲ್ ಅಂಡ್ ಆಯಿಲ್ ಕಂಪನಿ ಉಡುಪಿ, ಯಶಸ್ವಿ ಫಿಶ್ಮಿಲ್ ಅಂಡ್ ಆಯಿಲ್ ಕಂಪನಿ ಎಸ್ಇಜಡ್ ಮಂಗಳೂರು, ಆಕಾಶ್ ಫಿಶ್ಮಿಲ್ ಆ್ಯಂಡ್ ಫಿಶ್ ಆಯಿಲ್ ಕಂಪನಿ ಪ್ರೈವೇಟ್ ಲಿಮಿಟೆಡ್, ಮುಕ್ಕ ಪ್ರೋಟೀನ್ಸ್ ಲಿಮಿಟೆಡ್, ರಾಜ್ ಫಿಶ್ಮಿಲ್ ಆ್ಯಂಡ್ ಆಯಿಲ್ ಕಂಪನಿ, ಜನತಾ ಫಿಶ್ಮಿಲ್ ಆ್ಯಂಡ್ ಆಯಿಲ್ ಕಂಪನಿ, ಬ್ಲೂ ಲೈನ್ಸ್ ಫುಡ್ಸ್ (ಇಂಡಿಯಾ) ಲಿಮಿಟೆಡ್ ಎಫ್ಐಪಿಯ ಸದಸ್ಯ ಸಂಸ್ಥೆಗಳಾಗಿ ಭಾಗವಹಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-28-1176408331

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.